
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾದ ನಟ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಆದೇಶಿಸಿದೆ. ಇದರ ಜೊತೆಗೆ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ರಾಜ್ಯದ ಪ್ರತ್ಯೇಕ ಜೈಲಿಗೆ ಒಬ್ಬೊಬ್ಬರನ್ನು ಶಿಫ್ಟ್ ಮಾಡಲಾಗಿದೆ.
ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಆರೋಪಿಗಳನ್ನು ವಿವಿಧ ಜೈಲುಗಳಿಗೆ ಶಿಫ್ಟ್ ಮಾಡಲು ನಿನ್ನೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ನ್ಯಾಯಾಲಯದ ಒಪ್ಪಿಗೆಗೆ ಕಾಯುತ್ತಿದ್ದರು. ಇದೀಗ 24ನೇ ಎಸಿಎಂಎಂ ನ್ಯಾಯಾಲಯ, ಒಬ್ಬೊಬ್ಬ ಆರೋಪಿಗಳನ್ನು ಒಂದೊಂದು ಕಡೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಈ ಹಿನ್ನೆಲೆ ಡಿ ಗ್ಯಾಂಗ್ ಒಬ್ಬೊಬ್ಬರು ಒದೊಂದು ಕಡೆ ದಿಕ್ಕಾಪಾಲಾಗುವುದು ಖಚಿತವಾಗಿದೆ.
ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲು, ಜಗದೀಶ್ - ಶಿವಮೊಗ್ಗ ಜೈಲು, ಧನರಾಜ್ - ಧಾರವಾಡ ಜೈಲು, ವಿನಯ್ - ವಿಜಯಪುರ ಜೈಲು, ನಾಗರಾಜ್ - ಗುಲಬರ್ಗಾ (ಕಲಬುರಗಿ), ಲಕ್ಷ್ಮಣ್ - ಶಿವಮೊಗ್ಗ, ಪ್ರದೋಷ್ - ಬಳ್ಳಾರಿ ಜೈಲು, ಉಳಿದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಲಿದ್ದಾರೆ ಎಂದು ತಿಳಿದು ಬಂದಿದೆ.
Poll (Public Option)

Post a comment
Log in to write reviews