
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಶಾಕ್ ಕೊಟ್ಟಿದ್ದಾರೆ. ಬಳ್ಳಾರಿ ಜೈಲಿಗೆ ನನ್ನ ನೋಡಲು ಯಾರೂ ಬರೋದು ಬೇಡ ಎಂದು ಬಹಳ ಗಟ್ಟಿ ನಿರ್ಧಾರ ಮಾಡಿದ್ದಾರೆ.
ಸದ್ಯಕ್ಕೆ ನನಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ ಎಂದು ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.
ಎರಡು ತಿಂಗಳಿಂದ ಬಳ್ಳಾರಿ ಜೈಲಿನಲ್ಲಿರೋ ನಟ ದರ್ಶನ್ ಪತ್ನಿ, ತಾಯಿ, ಸಹೋದರ, ಸಹೋದರಿಯರನ್ನ ಭೇಟಿಯಾಗಿದ್ದರು. ಇವರ ಜೊತೆಗೆ ನಟ ಧನ್ವಿರ್, ನಿರ್ದೇಶಕ ಪ್ರಕಾಶ್, ಹರಿಕೃಷ್ಣ, ಶೈಲಜಾ ನಾಗ್, ಸಾಧು ಕೋಕಿಲ, ವಿನೋದ್ ಪ್ರಭಾಕರ್, ಅಭಿಶೇಕ್ ಅಂಬರೀಶ್ ಜೈಲಿಗೆ ತೆರಳಿ ದರ್ಶನ್ ಭೇಟಿ ಮಾಟಿದ್ದರು. ಇದರಿಂದ ಮತ್ತಷ್ಟು ನಟ, ನಟಿಯರು ದರ್ಶನ್ ನೋಡಲು ಜೈಲಿಗೆ ತೆರಳಲು ಕಾತರದಿಂದ ಕಾಯುತ್ತಿದ್ದರು. ಆದ್ರೆ, ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ ಎಂದು ಹೇಳಿರುವ ದರ್ಶನ್ ಮಾತಿನಿಂದ ಹಲವು ನಟಿಯರು ನಿರಾಶೆ ಮಾಡಿಕೊಂಡಿದ್ದಾರೆ.
ಇನ್ನು ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮೀ ಬಳಿ ನಟ, ನಟಿಯರು ಕೇಳಿಕೊಳ್ತಿದ್ದಾರೆ. ಅದನ್ನ ದರ್ಶನ್ ಬಳಿ ಹೇಳಿದಕ್ಕೆ, ಸದ್ಯಕ್ಕೆ ಯಾರು ಬರುವುದು ಬೇಡ ಎಂದಿದ್ದಾರೆ. ಸ್ವಲ್ಪ ದಿನದಲ್ಲೇ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಇದೆ, ಆಗ ನಾನೇ ಬೆಂಗಳೂರಿಗೆ ಬರುತ್ತೇನೆ, ಅಲ್ಲಿಯೇ ಭೇಟಿಯಾಗೋಣ ಎಂದು ದರ್ಶನ್ ಹೇಳಿದ್ದಾರೆ.
Poll (Public Option)

Post a comment
Log in to write reviews