
ಬೆಂಗಳೂರು: ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ಮನೆಯ ಬಳಿ ದರ್ಶನ್ ನೋಡಲು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳುನ್ನು ದರ್ಶನ್ ಪುತ್ರ ವಿನೀಶ್ ಸಮಾಧಾನ ಪಡಿಸಿದರು.
ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆಗೆ ಆಗಮಿಸಿದರು. ಈ ವೇಳೆ ನಿವಾಸದ ಬಳಿ ತಡರಾತ್ರಿಯಾದರೂ ದರ್ಶನ್ ನೋಡಲು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್..’ ಎಂದು ಜೈಕಾರ ಕೂಗಿದರು ಆಗ ನಿವಾಸದಿಂದ ಆಚೆ ಬಂದು ದರ್ಶನ್ ಪುತ್ರ ವಿನೀಶ್ ಮುಖ್ಯರಸ್ತೆ ತನಕ ನಡೆದುಕೊಂಡು ಬಂದು ಅಭಿಮಾನಿಗಳತ್ತ ಕೈಬೀಸಿದರು. ನಂತರ ಫ್ಯಾನ್ಸ್ ಅಭಿಮಾನಕ್ಕೆ ನಮಸ್ತೆ ಎಂದು ಸನ್ನೆ ಮಾಡಿದರು. ರಸ್ತೆ ಮಧ್ಯೆದಲ್ಲೇ ನಡೆದುಕೊಂಡು ಬಂದು ಅಭಿಮಾನಿಗಳನ್ನು ಸಮಾಧಾನಪಡಿಸಿದರು.
ಇಂದು (ಅ.31) ದರ್ಶನ್ ಪುತ್ರ ವಿನೀಶ್‌ಗೆ ಜನ್ಮದಿನದ ಸಂಭ್ರಮ. ಪುತ್ರನ ಹುಟ್ಟುಹಬ್ಬದ ದಿನವೇ ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದಾರೆ. ಇಂದು ನಿವಾಸದಲ್ಲಿ ಪುತ್ರನ ಬರ್ತ್‌ಡೇ ಸಂಭ್ರಮದಲ್ಲಿ ಪಾಲ್ಗೊಂಡು ನಂತರ ದರ್ಶನ್ ಆಸ್ಪತ್ರೆಗೆ ಶಿಫ್ಟ್ ಆಗಲಿದ್ದಾರೆಂದು ತಿಳಿದುಬಂದಿದೆ.
Poll (Public Option)

Post a comment
Log in to write reviews