
ಬೆಂಗಳೂರು : ನಟ ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ಇರೋದು ಇಂದು ನಿನ್ನೆಯಿಂದ ಅಲ್ಲ ಎಂಬುದನ್ನು ವೈದ್ಯರು ಹೇಳಿದ್ದಾರೆ.
ದರ್ಶನ್ ಅವರು ಜಾಮೀನು ಪಡೆಯಲೆಂದೇ ಬೆನ್ನು ನೋವಿನ ನಾಟಕ ಆಡಿದರು ಎಂದು ಅನೇಕರು ಮಾತನಾಡಿಕೊಂಡಿದ್ದು ಇದೆ. ಈ ವಿಚಾರವಾಗಿ ಅವರ ವಕೀಲರು ಸ್ಪಷ್ಟನೆ ಕೊಟ್ಟಿದ್ದಾರೆ. ‘ದರ್ಶನ್ಗೆ ಬೆನ್ನು ನೋವು ಇಂದು ನಿನ್ನೆ ಬಂದಿದ್ದಲ್ಲ. 2022-23ರಿಂದ ಈ ಸಮಸ್ಯೆ ಇದೆ. ಅದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಿದ್ದೇವೆ. ಹೀಗಾಗಿ ಜಾಮೀನು ಸಿಕ್ಕಿದೆ’ ಎಂದಿದ್ದಾರೆ.
Poll (Public Option)

Post a comment
Log in to write reviews