
ಬಳ್ಳಾರಿ : ದರ್ಶನ್ ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ, ವದಂತಿಗಳಿಗೆ ಕಿವಿಕೊಡಬೇಡಿ ಎಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಬಳಿಕ ಎಸ್.ಪಿ ಶೋಭಾರಾಣಿ ಅವರು ಹೇಳಿದ್ದಾರೆ.
ಈ ಬಗ್ಗೆ ಬಳ್ಳಾರಿಯಲ್ಲಿ ಎಸ್ಪಿ ಶೋಭಾರಾಣಿ ಅವರು ಮಾತನಾಡಿ, ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೈನ್ ಬಿಚ್ಚಿಸಲಾಗಿದೆ. ದರ್ಶನ್ ಹಾಕಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ, ದರ್ಶನ್ ಕೈಗೆ ಬೇಡಿ ಹಾಕಿಲ್ಲ. ಕೈಗೆ ನೋವಾಗಿರೋದ್ರಿಂದ ಅವರು ಬಟ್ಟೆ ಕಟ್ಟಿಕೊಂಡಿದ್ದರು, ದರ್ಶನ್ಗೆ ಊಟ ನೀಡಲಾಗಿದೆ, ಜೈಲಿನ ನಿಯಮ ಪಾಲಿಸ್ತಿದ್ದಾರೆ. ದರ್ಶನ್ ಕುಟುಂಬಸ್ಥರ ಭೇಟಿಗೆ ಮಾತ್ರ ಅವಕಾಶ ಇರುತ್ತದೆ ಎಂದಿದ್ದಾರೆ.
Poll (Public Option)

Post a comment
Log in to write reviews