
ಬೆಂಗಳೂರು : ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನನ್ನು ನೋಡಲು ತಾಯಿ ಮೀನಾ ಕುಟುಂಬದೊಂದಿಗೆ ಆಗಮಿಸಿದ್ದಾರೆ.
ಆದರೆ ಯಾವುದೇ ಆರೋಪಿಯನ್ನು ನೋಡಲು ಬರಬೇಕಾದರೆ ಕಾನೂನು ರೀತಿಯಲ್ಲಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಪರಪ್ಪನ ಅಗ್ರಹಾರದ ಜೈಲಧಿಕಾರಿಗಳು ಸಾಮಾನ್ಯ ಅಪರಾಧಿಗಳಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಖಾಸಗಿ ವಾಹನದಲ್ಲಿ ನಟ ದರ್ಶನ್ ಕುಟುಂಬವನ್ನು ಜೈಲಿಗೆ ಕರೆದುಕೊಂಡು ಹೋಗಿ ದರ್ಶನ್ ಅನ್ನು ಭೇಟಿ ಮಾಡಲು ಅವಕಾಶ ನೀಡಿದ್ದಾರೆ.
ಕಳೆದ ಸೋಮವಾರ ಕೂಡ ಮಾಧ್ಯಮಗಳ ಕಣ್ತಪ್ಪಿಸಿ , ದರ್ಶನ್ ಪತ್ನಿ ಮತ್ತು ಮಗನನ್ನು ಜೈಲಿನೊಳಗೆ ಕರೆದೊಯ್ಯಲಾಗಿತ್ತು. ಇಂದು ಕೂಡ ಖಾಸಗಿ ಕಾರಿನಲ್ಲಿ ಪೊಲೀಸ್ ಸಿಬ್ಬಂದಿ ದರ್ಶನ್ ತಾಯಿಯನ್ನು ಕರೆದೊತ್ದಿದ್ದಾರೆ. ಇದರಿಂದಾಗಿ ಜೈಲಿನ ಅವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯುತ್ತಿದೆ. ಅಧಿಕಾರಿಗಳು ಜನ ಸಾಮಾನ್ಯ ಅಪರಾಧಿಗಳಿಗೆ ಒಂದು ನ್ಯಾಯ ಮತ್ತು ಇತರೆ ವ್ಯಕ್ತಿಗಳಿಗೆ ಒಂದು ನ್ಯಾಯ ಎಂಬಂತೆ ಭೇದ ಭಾವ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
Poll (Public Option)

Post a comment
Log in to write reviews