ದರ್ಶನ್ ರಾಜಾತಿಥ್ಯ ಕೇಸ್ : ಎಣ್ಣೆ ಸಪ್ಲೈ ಜಾಲವನ್ನು ಪತ್ತೆಹಚ್ಚುತ್ತೀರುವ ಅಧಿಕಾರಿಗಳು
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿ ರುವ ನಟ ದರ್ಶನ್ ನಾಳೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹಾಗಾಗಿ ನಾಳೆಯೇ ನಟ ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ. ಇನ್ನೂ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಿದ ಪ್ರಕರಣ ಸದ್ದು ಮಾಡಿದ್ದು ಪ್ರಕರಣದಲ್ಲಿ ತನಿಖಾಧಿಕಾರಿಗಳು ತನಿಖೆ ತಡೆಸುತ್ತಿದ್ದು. ಎಣ್ಣೆ ಬಾಟೆಲ್ಗೆ ಎರಡ್ಮೂರು ಸಾವಿರವಾದರೆ. ಅದನ್ನು ಜೈಲಿನೊಳಗೆ ಸಾಗಿಸಲು 25 ಸಾವಿರ ಹಣ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ತನಿಖೆ ವೇಳೆ ಜೈಲಾಧಿಕಾರಿಗಳ ಒಂದೊಂದೆ ಕಳ್ಳಾಟಗಳು ಬಯಲಾಗಿವೆ. ಜೈಲಿನೊಳಗೆ ಮೊಬೈಲ್ ಸೇರಿದಂತೆ ಡಿಂಕ್ಸ್ ಕೂಡ ಸಪ್ಲೈಯಾಗುತ್ತಿದ್ದು, ಅವುಗಳ ಬಗ್ಗೆ ಬಹುತೇಕ ತನಿಖೆ ಮುಗಿಸಿರು ಪೋಲಿಸರು ಇನ್ನೇನು ಕೆಲವೆ ದಿನಗಳಲ್ಲಿ ಚಾರ್ಜಶೀಟ್ ಸಲ್ಲಿಕೆ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಯಾರ್ಯಾರು ಎಣ್ಣೆ ತಂದು ಕೊಡುತ್ತಿದ್ದರು ಎಂಬುದರ ಹಿಂದೆ ಬಿದ್ದಿರುವ ಆಗ್ನೇಯ ವಿಭಾಗದ ಪೋಲಿಸರು. ಕೆಲವರಿಗೆ ಈಗಾಗಲೇ ನೋಟಿಸ್ ನೀಡಿದ್ದಾರೆ. ಸದ್ಯ ಮೂರು ಎಫ್ಐಆರ್ ದಾಖಲಿಸಿರುವ ಪೋಲಿಸರು ವಿಚಾರಣೆ ನಡೆಸುತ್ತಿದ್ದು. ಚೀಪ್ ಸೂಪರ್ಡೆಂಟ್ ಹಾಗೂ ಸೂಪರ್ಡೆಂಟ್ ಅವರ ವಿಚಾರಣೆ ನಡೆಸಲು ಅನುಮತಿ ಕೋರಿ ಪತ್ರ ಬರೆದಿದ್ದು. ವಿಚಾರಣೆ ಮುಗಿದ ಕೂಡಲೆ ಚಾರ್ಜಶೀಟ್ ಸಲ್ಲಿಕೆ ಮಾಡಲು ಎಲ್ಲಾ ತಯಾರಿ ನಡೆಸಲಾಗಿದೆ.
Post a comment
Log in to write reviews