
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ಗೆ ಯಾವುದೇ ವಿಶೇಷ ರಾಜಾತಿಥ್ಯ ನೀಡಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಸಾಮಾನ್ಯ ಖೈದಿಯಂತೆ ಕಾನೂನು ಪ್ರಕಾರ ನಡೆಸಿಕೊಳ್ಳಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್‌ಗೆ ಬಿರಿಯಾನಿ ಕೊಟ್ಟು ಸತ್ಕರಿಸಿ ಯಾವುದೇ ರಾಜಾತಿಥ್ಯ ನೀಡುತ್ತಿಲ್ಲ ಅದಕ್ಕೆ ಅವಕಾಶವೂ ಇಲ್ಲ. ಸದ್ಯಕ್ಕೆ ಮುಕ್ತವಾಗಿ ತನಿಖೆ ಮಾಡಲು ಪೊಲೀಸರಿಗೆ ಸಮಯಾವಕಾಶ ನೀಡಬೇಕಿದೆ. ಅಲ್ಲದೇ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.
Poll (Public Option)

Post a comment
Log in to write reviews