ಬೆಂಗಳೂರು: ನಟ ದರ್ಶನ್ ಅವರ ವಿರುದ್ಧ ಕೋರ್ಟ್ಗೆ ಸಲ್ಲಿಕೆ ಆದ ಚಾರ್ಜ್ಶೀಟ್ನ ವಿಚಾರಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿತ್ತು. ದರ್ಶನ್ ಅವರ ಕ್ರೌರ್ಯ ಯಾವ ರೀತಿಯಲ್ಲಿ ಇತ್ತು ಎಂಬದನ್ನು ವಿವರಿಸಲಾಗುತ್ತಿದೆ. ಈಗ ದರ್ಶನ್ ಅವರು ಇದಕ್ಕೆ ನಿರ್ಬಂಧ ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಕೀಲರು ಈ ವಿಚಾರದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 17 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ಶೀಟ್ನಲ್ಲಿ ದರ್ಶನ್ ಅವರು ಏನು ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ರೇಣುಕಾ ಸ್ವಾಮಿಗೆ ಕೊಟ್ಟ ಚಿತ್ರ ಹಿಂಸೆಗಳ ಬಗ್ಗೆ ವಿವರಣೆ ನೀಡಲಾಗಿತ್ತು. ಇವುಗಳ ಪ್ರಸಾರದ ಮೇಲೆ ನಿರ್ಬಂಧ ಹೇರಿ ಎಂದು ದರ್ಶನ್ ಕೋರಿದ್ದಾರೆ. ಈ ಕುರಿತು ದರ್ಶನ್
ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಾರ್ಜ್ಶೀಟ್ನಲ್ಲಿನ ಗೌಪ್ಯ ಮಾಹಿತಿ ಬಹಿರಂಗಪಡಿಸದಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇತ್ತೀಚೆಗೆ ದರ್ಶನ್ ಇರೋ ಸೆಲ್ಗೆ ಟಿವಿ ಬಂದಿದೆ. ಅವರು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಜೈಲಿನ ನಿಯಮದಂತೆ ಅವರಿಗೆ ಟಿವಿ ನೀಡಲಾಗಿದೆ. ಟಿವಿ ವೀಕ್ಷಣೆ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.
ದರ್ಶನ್ ಅವರು ರೇಣುಕಾಸ್ವಾಮಿಗೆ ಮಾಂಸದ ಊಟ ತಿನ್ನಿಸಿದ್ದು, ಎದೆಗೆ ಒದ್ದಿದ್ದು, ಖಾಸಗಿ ಭಾಗಕ್ಕೆ ಒದ್ದಿದ್ದರ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಈ ಎಲ್ಲಾ ವಿಚಾರಗಳು ದರ್ಶನ್ ಚಿಂತೆ ಹೆಚ್ಚಿಸಿವೆ. ಈ ಕಾರಣದಿಂದಲೇ ದರ್ಶನ್ ಅವರು ನಿರ್ಬಂಧಕ್ಕಾಗಿ ಕೋರಿದ್ದಾರೆ ಎನ್ನಲಾಗಿದೆ.
Post a comment
Log in to write reviews