
ಬೆಂಗಳೂರು : ಕೊಲೆ ಆರೋಪಿ ನಟ ದರ್ಶನ್ ಸೇರಿದಂತೆ ಇತರೆ ನಾಲ್ಕು ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ.
ಈ ವೇಳೆ ನ್ಯಾಯಾಲಯದ ಬಳಿ ದರ್ಶನ್ ಅಭಿಮಾನಿಗಳು ಹೆಚ್ಚಾಗಿ ಸೇರುವ ಸಾಧ್ಯತೆ ಹಿನ್ನೆಲೆ ಕೆಎಸ್ಆರ್‌ಪಿ ಪೊಲೀಸ್ ಸಹಿತ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನಟ ದರ್ಶನ್‌ನನ್ನು ಇಂದು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡುದ್ರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಇರಿಸಬಹುದು. ಆಗ ಜೈಲಿನ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ ಎಂದು, ಜೈಲಿನ ಬಳಿಯೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
ಕಳೆದವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಅಭಿಮಾನಿಗಳು ಗಲಭೆ ನಡೆಸಿದ್ದರು. ಕರ್ತವ್ಯನಿರತ ಓರ್ವ ಮಾಧ್ಯಮ ಪ್ರತಿನಿಧಿಯ ಮೇಲೆ ನ್ಯಾಯಾಲಯ ಆವರಣದಲ್ಲೇ ಹಲ್ಲೆ ನಡೆದ್ದಿತ್ತು. ಇಂತಹ ಘಟನೆ ಮತ್ತೆ ಮರುಕಳಿಸಿದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಮಾಡಲಾಗಿದೆ.
Poll (Public Option)

Post a comment
Log in to write reviews