ಜೈಲಿನಲ್ಲಿ ದರ್ಶನ್ ಸಂಕಟಪಡುತ್ತಿದ್ದಾರೆ: ಹಿರಿಯ ನಟಿ ಗಿರಿಜಾ ಲೋಕೇಶ್ ಭಾವುಕ ಮಾತು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಬಗ್ಗೆ ಮಾತನಾಡುತ್ತಾ ಹಿರಿಯ ನಟಿ ಗಿರಿಜಾ ಲೋಕೇಶ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಅವನು ಕಷ್ಟಪಡುವುದನ್ನು ನೋಡಿದರೆ ತುಂಬಾ ಸಂಕಟ ಆಗುತ್ತೆ, ಅದರಿಂದ ಬೇಗ ಆಚೆ ಬರಲಿ ಎಂದು ಅವರು ಹಾರೈಸಿದ್ದಾರೆ.
ʼʼಪ್ರಕರಣ ಕಾನೂನಿನ ಚೌಕಟ್ಟಿನಲ್ಲಿ ಇದೆ. ನಾವು ಏನು ಮಾತನಾಡೋದಕ್ಕೆ ಆಗಲ್ಲ. ತಪ್ಪು ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ. ನನ್ನ ಕಣ್ಣೆದುರಲ್ಲೇ ಬೆಳೆದ ದರ್ಶನ್ ಆ ಥರ ಅಲ್ಲ. ನಾನು ಕಂಡಂತೆ ದರ್ಶನ್ ಆ ರೀತಿ ಇರಲಿಲ್ಲ. ಮುಗ್ಧ ಸ್ವಭಾವದ ಆತ ತಂದೆಗೆ ಹೆದರಿಕೊಳ್ತಿದ್ದ. ಇದೆಲ್ಲ ಕನಸಾಗಿರಬಾರದ ಅಂತ ಅನ್ನಿಸುತ್ತೆʼʼ ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.
ʼʼದರ್ಶನ್ ತಂದೆ ನಿಧನ ಹೊಂದಿದಾಗ, ಅಕ್ಕನ ಮದುವೆ ಮಾಡಿದಾಗ ಹೇಗಿದ್ದ ಎನ್ನುವುದನ್ನು ನಾನು ನೋಡಿದೀನಿ. ಚಿತ್ರರಂಗಕ್ಕೆ ಬಂದಾಗ ಯಾವ ರೀತಿ ಅವಮಾನಗಳನ್ನ ಎದುರಿಸಿ ಮುಂದೆ ಬಂದಿದ್ದಾನೆ, ಹೇಗೆ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎನ್ನುವುದನ್ನೂ ಗಮನಿಸಿದ್ದೇನೆ. ಹೀಗಾಗಿ ಆರೋಪ ಮುಕ್ತನಾಗಿ ಬೇಗ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತೆನೆʼʼ ಎಂದು ಅವರು ತಿಳಿಸಿದ್ದಾರೆ.
Poll (Public Option)

Post a comment
Log in to write reviews