2024-12-24 06:00:48

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದರ್ಶನ್‌ ಚಾರ್ಜ್‌ಸೀಟ್‌ ಲಬ್ಯ

ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಚಾರ್ಜ್​ಶೀಟ್​ ಸಲ್ಲಿಕೆ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್ ಪ್ರತಿ  ಲಭ್ಯವಾಗಿದೆ. ಇದರಲ್ಲಿ ಆರೋಪಿ ದರ್ಶನ್​ ನೀಡಿದ ಸ್ವಇಚ್ಛಾ ಹೇಳಿಕೆ ಇದೆ. ಈ ಕೇಸ್​ನಲ್ಲಿ ಎ2 ಆಗಿರುವ ದರ್ಶನ್ ವಿರುದ್ಧ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಮೆಸೇಜ್​ ಮಾಡಿದ್ದಕ್ಕೆ ಇಷ್ಟೆಲ್ಲ ದುರಂತ ನಡೆದು ಹೋಗಿದೆ. ತನಿಖೆಯ ವೇಳೆ ದರ್ಶನ್​ ನೀಡಿದ ಹೇಳಿಕೆಯಲ್ಲಿ ಅನೇಕ ಶಾಕಿಂಗ್​ ಸಂಗತಿಗಳು ತಿಳಿದುಬಂದಿವೆ. ದರ್ಶನ್​ ನೀಡಿದ ಸ್ವಇಚ್ಛಾ ಹೇಳಿಕೆ ಹೀಗಿದೆ.

ನಾನು ರಾಜರಾಜೇಶ್ವರಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಚಿತ್ರನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. 2011ರ ಸೆ.9ರಂದು ನನ್ನ ಪತ್ನಿ ವಿಜಯಲಕ್ಷ್ಮೀ ದೂರು ನೀಡಿದ್ದರು. ನನ್ನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಮೊ.ಸಂ: 425/2011 ಐಪಿಸಿ ಸೆಕ್ಷನ್ 498ಎ, 355, 307, 323, 5060 ಕೇಸ್ ದಾಖಲಾಗಿ ಖುಲಾಸೆಯಾಗಿರುತ್ತದೆ. ನಾನು, ನನ್ನ ಪತ್ನಿ, ಮಗ ಹೊಸಕೆರೆಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದೇವೆ.’

‘ನನ್ನ ಪತ್ನಿ ಗೃಹಿಣಿ, ಮಗ 10ನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾನೆ. ನಾನು, ವಿಜಯಲಕ್ಷ್ಮೀ ಮದುವೆಯಾಗಿ 22 ವರ್ಷವಾಗಿದ್ದು, ಪವಿತ್ರಾಗೌಡ 10 ವರ್ಷಗಳಿಂದ ಲೀವ್​ಇನ್ ರಿಲೇಷನ್​ಶಿಪ್​ನಲ್ಲಿದ್ದು ಪವಿತ್ರಾಗೌಡ ನನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುತ್ತಾರೆ. ಪವನ್ ಮನೆ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿರುತ್ತಾನೆ. ನಂದೀಶ್ ಎಂಬುವನು ನನ್ನ ಅಭಿಮಾನಿ, ಆತನ ಪರಿಚಯವಿದೆ.

‘ಲಕ್ಷ್ಮಣ ನನ್ನ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ವಿನಯ್ ಸುಮಾರು 3-4 ವರ್ಷಗಳಿಂದ ನನಗೆ ಪರಿಚಯ ಇದೆ. ವಿನಯ್​ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿರುತ್ತಾರೆ. ನಾಗರಾಜ್ ಮೈಸೂರಿನ ನನ್ನ ಫಾರ್ಮ್​ಹೌಸ್​ ನೋಡಿಕೊಳ್ತಿದ್ದರು. ಪ್ರದೋಶ್​ ನನಗೆ ಸುಮಾರು 16 ವರ್ಷಗಳಿಂದ ಪರಿಚಯವಿದೆ. ಪ್ರದೋಶ್ ಆಗಾಗ ನನ್ನ ಮನೆಗೆ ಬಂದು ಹೋಗುತ್ತಿರುತ್ತಾನೆ. ಚಿತ್ರದುರ್ಗದ ರಾಘವೇಂದ್ರ ನನ್ನ ಅಭಿಮಾನಿಯಾಗಿದ್ದು, ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿರುತ್ತಾನೆ’ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್​​ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ.

 

 

 

Post a comment

No Reviews