2024-12-24 06:59:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಲಿತೆಯ ಮನೆ ಧ್ವಂಸ: ದೂರು ದಾಖಲು

ದಲಿತ ಮಹಿಳೆಯೊಬ್ಬರ ಮನೆಯನ್ನುನೆರೆಮನೆಯವರು ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ  ಚಿಕ್ಕಜಾಲದ ಪಾಳೇಕಮ್ಮ ನಗರದಲ್ಲಿ ನಡೆದಿದೆ.

ಮನೆ ಕಳೆದುಕೊಂಡ ದಲಿತ ಮಹಿಳೆ ಗಂಡನನ್ನ ಕಳೆದುಕೊಂಡು ನಿರ್ಗತಿಕರಾಗಿದ್ದರು. ಆ ಮಹಿಳೆಗೆ ಆಸರೆ  ಆಗಲೆಂದು  ಆಕೆಯ ತಾಯಿ ಒಂದೂ ಪುಟ್ಟ ಮನೆಯನ್ನುಗ್ರಾಮದಲ್ಲಿ ಕಟ್ಟಿಕೊಟ್ಟಿದ್ದರು. ಆದರೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಣಿ, ಮಂಜು, ಪವಿತ್ರ, ಪಾಪಮ್ಮ,ರಾಜೇಶ್ವರಿ ಎನ್ನುವವರು ಏಕಾಏಕಿ  ಈ ಜಾಗ ನಮಗೆ ಸೇರಿದ್ದು ಎಂದು ದರ್ಪದಿಂದ ಮನೆಯನ್ನು ಹೊಡೆದು ಹಾಕಿದ್ದಾರೆ ಎಂಬ ಆರೋಪವಿದೆ.

ಇದಲ್ಲದೆ ಗಲಾಟೆ ವೇಳೆ ಮನೆಯಲ್ಲಿ ಇದ್ದ ಇಬ್ಬರು ಹೆಣ್ಣು ಮಕ್ಕಳ ಜೊತೆ ಗಂಡಸರು ಅಸಭ್ಯವಾಗಿ ವರ್ತಿಸಿ ಮನೆಯಿಂದ  ಹೊರ ದಬ್ಬಿದ್ದಾರೆ.  ಈ ಕೃತ್ಯದ ಬಗ್ಗೆ ರಕ್ಷಿತಾ ಪೊಲೀಸರಿಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಕೂಡ ದೂರು ದಾಖಲಿಸಿ ಕೊಳ್ಳದೆ ಅಸಡ್ಡೆ ತೋರಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ನಮಗೆ ನ್ಯಾಯ ಒದಗಿಸುವಂತೆ ನೊಂದ ಮಹಿಳೆ ನಮ್ಮಸಮಯ ವಾಹಿನಿಗೆ  ಸಹಾಯ ಹಸ್ತ ಬೇಡಿದ್ದು ಸ್ಥಳಕ್ಕೆ ಧಾವಿಸಿದ ನಮ್ಮ ತಂಡ ಆರೋಪಿಗಳ ಮೇಲೆ  ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ FIR  ದಾಖಲಿಸಲು ನೆರವಾಗಿ ನ್ಯಾಯದ ಪರವಾಗಿ ಹೋರಾಡಿದೆ.

 

Post a comment

No Reviews