ಚೆನ್ನೈ: ಕಾರ್ಪೋರೇಷನ್ನ ಪ್ರಥಮ ಮಹಿಳಾ ದಫೇದಾರ್ ಕಾರಣ ಅವರನ್ನು ವರ್ಗಾಯಿಸಿದ ಘಟನೆ ನಡೆದಿದೆ. ಅಧಿಕೃತ ಕಾರ್ಯಕ್ರಮದಲ್ಲಿ ಲಿಪ್ಸ್ಟಿಕ್ ಹಚ್ಚಬಾರದು ಎಂಬ ನಿಯಮವನ್ನು ಉಲ್ಲಂಘಿಸಿದ ಕಾರಣ ವರ್ಗಾವಣೆ ಮಾಡಲಾಗಿದೆ.
50 ವರ್ಷ ವಯಸ್ಸಿನ ಎಸ್.ಬಿ ಮಾಧವಿ ಅವರು ವರ್ಗಾವಣೆಗೊಂಡವರು. ಮೇಯರ್ ಪರಿವಾರದ ಭಾಗವಾಗಿದ್ದ ಇವರು ಅಧಿಕೃತ ಕಾರ್ಯಕ್ರಮದಲ್ಲಿ ಲಿಪ್ಸ್ಟಿಕ್ ಧರಿಸಬಾರದು ಎಂಬ ನಿಯಮ ಉಲ್ಲಂಘಿಸಿ ಶಿಕ್ಷೆಗೆ ಒಳಗಾಗಿದ್ದಾರೆ.
ಮೇಯರ್ ಆರ್ ಪ್ರಿಯಾ ಅವರ ಆಪ್ತ ಸಹಾಯಕ ಶಿವಶಂಕರ್ ಇದರ ಕುರಿತು ಅವರ ಬಳಿ ಪ್ರಶ್ನಿಸಿದ್ದರು. ಇದಕ್ಕೆ ಎಸ್.ಬಿ ಮಾಧವಿಯವರು ಸಮರ್ಥನೆ ನೀಡಿದ ಬೆನ್ನಲ್ಲೇ ವರ್ಗಾಯಿಸಲಾಗಿದೆ.
ಆಗಸ್ಟ್ 6 ರಂದು ಎಸ್.ಬಿ ಮಾಧವಿಯವರಿಗೆ ಈ ಕುರಿತು ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು ‘ನೀವು ನನಗೆ ಲಿಪ್ಸ್ಟಿಕ್ ಹಚ್ಚಬಾರದು ಎಂದು ಸೂಚಿಸಿದ್ದೀರಿ. ಆದರೆ ನಾನು ಹಚ್ಚಿದ್ದೇನೆ. ಇದು ಅಪರಾಧವಾದರೆ ಲಿಪ್ ಸ್ಟಿಕ್ ಹಚ್ಚುಬಾರದು ಎಂದು ನಿಷೇಧಿಸುವ ಸರ್ಕಾರದ ಆದೇಶವನ್ನು ತೋರಿಸಿ’ ಎಂದು ಹೇಳಿದ್ದರು.
‘ಇಂತಹ ಹಕ್ಕುಗಳು ಮಾನವ ಹಕ್ಕು ಉಲ್ಲಂಘನೆ. ನಾನು ನನ್ನ ಕರ್ತವ್ಯದ ಅವಧಿಯಲ್ಲಿ ಕೆಲಸ ಮಾಡದಿದ್ದರೆ ಈ ನೋಟಿಸ್ ಮಾನ್ಯವಾಗುತ್ತದೆ’ ಎಂದು ಎಸ್.ಬಿ ಮಾಧವಿ ಹೇಳಿದ್ದಾರೆ.
ಸದ್ಯ ಎಸ್.ಬಿ ಮಾಧವಿಯವರನ್ನು ಕೆಲಸ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು, ಮೇಲಾಧಿಕಾರಿಗಳ ಅವಿಧೇಯತೆ ತೋರುವುದು ಮುಂತಾದ ಕಾರಣವನ್ನು ನೀಡಿ ಎಸ್.ಬಿ ಮಾಧವಿಯವರಿಗೆ ನೋಟಿಸ್ ಕೊಡಲಾಗಿದೆ. ಮಾತ್ರವಲ್ಲದೆ, ಮನಾಲಿ ವಲಯಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ.
Post a comment
Log in to write reviews