
ಬೆಂಗಳೂರು: ನಟ ದರ್ಶನ್ & ಗ್ಯಾಂಗ್ನಿಂದ ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಕೇಸ್ ಆರೋಪ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಎಸಿಎಂಎಂ ಕೋರ್ಟ್ ನಟ ದರ್ಶನ್ ಸೇರಿದಂತೆ 6 ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪ್ರಕರಣದ ಆರೋಪಿಗಳ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಇಂದು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಮೃತನ, ಹಾಗೂ ಆರೋಪಿಯ ಮೊಬೈಲ್ ಗಳನ್ನು ಕಲೆ ಹಾಕಬೇಕು. ಇದರಿಂದ ಹೆಚ್ಚು ಮಾಹಿತಿ ಸಿಗಲಿದೆ. ಇದು ಭೀಕರ ಕೊಲೆ ಕೇಸ್ ಆಗಿದ್ದರಿಂದ ಇನ್ನಷ್ಟು ಮಾಹಿತಿಯನ್ನು ಪತ್ತೆ ಹಚ್ಚಬೇಕಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್, ವಿನಯ್, ಪ್ರದೂಶ್, ಧನರಾಜ್, ನಾಗರಾಜ್, ಲಕ್ಷ್ಮಣ್ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು.
ಕೇಸ್‌ನಲ್ಲಿ ಪವಿತ್ರಾಗೌಡ A1, ದರ್ಶನ್ A2 ಆರೋಪಿಯಾಗಿದ್ದಾರೆ. ದರ್ಶನ್ ಆಪ್ತೆ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂದು ಆರೋಪಿಸಿ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಸೇರಿ ಸಹಚರರು ರೇಣುಕಾಸ್ವಾಮಿಯನ್ನ ಜೂ.9ರಂದು ಹಲ್ಲೆ ನಡೆಸಿ, ಕೊಂದಿದ್ದಾರೆಂಬ ಆಪಾದನೆ ಇದೆ.
Poll (Public Option)

Post a comment
Log in to write reviews