ಬೆಂಗಳೂರು: ಈ ಶಂಕರಪ್ಪ ಡಿಡಿಯೂಟಿಟಿಎಲ್ ನಲ್ಲಿ ಎಂಡಿ ಆಗಿ ಕೆಲಸ ಮಾಡುತ್ತಿದ್ದರು. ಅವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಹಣ ಅಕ್ರಮವಾಗಿದೆ ಎಂದು ಹಾಲಿ ಎಂಡಿ ಸಿ ಎನ್ ಶಿವಪ್ರಕಾಶ್ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. ಹಾಗೆಯೇ ಅವರ ಮೇಲೆ 2023 ಸೆಪ್ಟೆಂಬರ್ 23ರಂದು ಎಫ್ ಐ ಆರ್ ಕೂಡಾ ದಾಖಲಾಗಿತ್ತು. ಪೊಲೀಸರು ಈ ವಿಷಯದ ಬಗ್ಗೆ ವಿಚಾರಣೆ ನಡೆಸಿದಾಗ 47.10 ಕೋಟಿ ಹಣ ಅಕ್ರಮವಾಗಿರುವುದು ತಿಳಿದುಬಂದಿದೆ.
ಏನಿದು ಪ್ರಕರಣ ಎಂದು ನೋಡುವುದಾದರೆ ಡಿಡಿಯೂಟಿಟಿಎಲ್ 2021 ಅಕ್ಟೋಬರ್ 25ರಂದು 194ನೇ ನಿರ್ದೇಶಕ ಮಂಡಳಿ ಸಭೆ ನಡೆಸಲಾಗಿತ್ತು. ಅಲ್ಲಿ ಟರ್ಕ್ ಟರ್ಮಿನಲ್ ಗಳ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಯನ್ನು ತುರ್ತಾಗಿ ಗುಂಡ ಗುತ್ತಿಗೆ ನೀಡುವ ಬಗ್ಗೆ ಚರ್ಚೆ ಸಹ ನಡೆದಿತ್ತು. ಈವೇಳೆ 10 ಕೋಟಿವರೆಗೆ ಗುಂಡ ಗುತ್ತಿಗೆ ನೀಡಲು ಅಕ್ರಮವಾಗಿ ಶಂಕರಪ್ಪ ಅನುಮೋದನೆ ಮಾಡಿ ನಿರ್ಣಯ ಮಾಡಿದ್ದರು ಎನ್ನಲಾಗಿದೆ. ಹಾಗೆಯೇ ಎಲ್ಲಾ ಕಾಮಗಾರಿ ನಡೆಯದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ನಂತರ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಆಗ ಈ ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ ಅಧಿಕಾರಿಗಳಿಗೆ ಸತ್ಯಾಂಶ ತಿಳಿದಿದೆ. ಈ ಹಿನ್ನಲೆ 600ಕ್ಕೂ ಹೆಚ್ಚು ದಾಖಲೆಗಳು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಶಂಕರಪ್ಪನನ್ನು ಬಂಧಿಸಿದ್ದಾರೆ.
Post a comment
Log in to write reviews