ರೈಲ್ವೇ ಟ್ರ್ಯಾಕ್ ಮೇಲೆ ಮತ್ತೆ ಸಿಲಿಂಡರ್ ಪತ್ತೆ - ನಿಲ್ಲದ ಕಿಡಿಗೇಡಿಗಳ ದುಷ್ಕೃತ್ಯ!

ಉತ್ತರ ಪ್ರದೇಶ: ಇತ್ತೀಚೆಗೆ ರೈಲು ಹಳಿ ತಪ್ಪುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿಂದೆ ಏನಾದರೂ ವಿಧ್ವಂಸಕ ಕೃತ್ಯ ನಡೆಸುವ ಕಾಣದ ಕೈಗಳ ಕೈವಾಡ ಇರಬಹುದೇ ಎಂಬ ಶಂಕೆ ರೈಲ್ವೆ ಅಧಿಕಾರಿಗಳಲ್ಲಿ ಮೂಡಿದೆ. ಆದರೆ ಇದೀಗ ಮತ್ತೊಮೆ ಅನುಮಾನಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಲೋಕೋ ಪೈಲೆಟ್ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ರೈಲು ಅಪಘಾತಕ್ಕೆ ಬ್ರೇಕ್ ಬಿದ್ದಿದೆ. ರೈಲ್ವೇ ಟ್ರ್ಯಾಕ್ ನಲ್ಲಿ ಕಿಡಿಗೇಡಿಗಳು ಸಿಲಿಂಡರ್ ಇಟ್ಟಿದ್ದರು. ಇದನ್ನ ಗಮನಿಸಿದ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನ ಲೋಕೋ ಪೈಲೆಟ್ ತಕ್ಷಣ ಬ್ರೇಕ್ ಹಾಕಿ, ಟ್ರೈನ್ ನಿಲ್ಲಿಸುವುದಲ್ಲಿ ಯಶಸ್ವಿಯಾಗಿದ್ದಾರೆ.ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ.
ಇತ್ತೀಚೆಗಷ್ಟೇ ಕಾನ್ಪುರದ ಪೆರಂಬುರ್ ರೈಲ್ವೆ ಸ್ಟೇಷನ್ ನಲ್ಲಿಯೂ ರೈಲ್ವೆ ಹಳಿಯ ಮೇಲೆ LPG ಸಿಲೆಂಡರ್ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದಾದ ಕೆಲ ದಿನಗಳ ಬೆನ್ನಲ್ಲೇ ಪುಷ್ಪಕ್ ಎಕ್ಸ್ ಪ್ರೆಸ್ ರೈಲು ಸಂಚರಿಸೋ ಹಳಿ ಮೇಲೆ ಮತ್ತೆ ಸಿಲಿಂಡರ್ ಪತ್ತೆಯಾಗಿತ್ತು. ಪದೇ ಪದೇ ಕಿಡಿಗೇಡಿಗಳು ಈ ರೀತಿಯ ದುಷ್ಕೃತ್ಯ ನಡೆಸಲು ಪ್ಲಾನ್ ಹಾಕುತ್ತಿದ್ದಾರೆ. ಪೊಲೀಸರು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.
Poll (Public Option)

Post a comment
Log in to write reviews