ಜಗತ್ತು
ಭಾರತ ಮತ್ತು ಪಾಕಿಸ್ತಾನ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ: 18 ಸಾವಿರ ಜನರನ್ನು ಸ್ಥಳಾಂತರ

ಅಹಮದಾಬಾದ್: ಅರಬ್ಬೀ ಸಮುದ್ರ ತೀರದುದ್ದಕ್ಕೂ ಇರುವ ಭಾರತ ಮತ್ತು ಪಾಕಿಸ್ತಾನ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಪಶ್ಚಿಮ ಭಾರತದ ಗುಜರಾತ್‌ನ ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಾವಿರಾರು ಜನ ಮನೆ ತೊರೆಯುವ ಪರಿಸ್ಥಿತಿ ಎದುರಾಗಿದೆ. ಶುಕ್ರವಾರದ ಒಳಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕರಾವಳಿಯಲ್ಲಿ ಭಾರಿ ಮಳೆ ಮತ್ತು ಜೋರಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಭಾನುವಾರದಿಂದ ಕರಾವಳಿ ಸಮೀಪವಿರುವ ನಗರಗಳಿಂದ ಸುಮಾರು 18 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದ ವೇಳೆಗೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ. ಇದು ಮುಂದಿನ ಎರಡು ದಿನಗಳಲ್ಲಿ ಭಾರತೀಯ ಕರಾವಳಿಯಿಂದ ದೂರ ಚಲಿಸುವ ಮುನ್ಸೂಚನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Poll (Public Option)

Post a comment
Log in to write reviews