
ಡಾನಾ ಚಂಡಮಾರುತದಿಂದ ನಾಳೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇನ್ನೂ ಚಂಡಮಾರುತದಿಂದ 2 ರಾಜ್ಯಗಳಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.
ಅಕ್ಟೋಬರ್ 25ರಂದು ಭಿತರ್ಕಾನಿಕಾ ಪಾರ್ಕ್ ಮತ್ತು ಧಮ್ರಾ ಬಂದರಿನ ನಡುವೆ ಚಂಡಮಾರುತ ಪ್ರವೇಶಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಇಂದು ಒಡಿಶಾ ಮತ್ತು ಬಂಗಾಳಕ್ಕೆ ಭಾರೀ ಮಳೆಯ ರೆಡ್ ಅಲರ್ಟ್ ಘೋಷಿಸಲಾಗಿದೆ.
ಒಡಿಶಾ ಮತ್ತು ಬಂಗಾಳದಲ್ಲಿ ಅತಿ ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಇಂದು ಮತ್ತು ಅಕ್ಟೋಬರ್ 25ರಂದು ರೆಡ್ ಅಲರ್ಟ್ ಘೋಷಿಸಿದೆ. IMD ಮುನ್ಸೂಚನೆಯ ಪ್ರಕಾರ, ಬಲೇಶ್ವರ್, ಮಯೂರ್‌ಭಂಜ್‌ನ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಂತ ಭಾರೀ ಮಳೆಯಾಗಲಿದೆ. ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂದು ಸಂಜೆ 6 ರಿಂದ ನಾಳೆ ಬೆಳಿಗ್ಗೆ 9 ರವರೆಗೆ ಸುಮಾರು 15 ಗಂಟೆಗಳ ಕಾಲ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿದೆ.
Poll (Public Option)

Post a comment
Log in to write reviews