
ನವದೆಹಲಿ: ಈಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು 8,337 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 1,644 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವ ಹಿನ್ನೆಲೆ ಇರುವವರು ಎಂದು ಚುನಾವಣೆ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆ ಅಂಕಿ ಅಂಶ ನೀಡಿದೆ.
ಇದರಲ್ಲಿ 1,188 ಅಭ್ಯರ್ಥಿಗಳು ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕೊಲೆ, ಕೊಲೆ ಯತ್ನ, ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ದ್ವೇಷದ ಭಾಷಣಗಳು ಮಾಡಿರುವ ಆರೋಪಗಳಾಗಿವೆ. ಹಂತ ಒಂದರಲ್ಲಿ 1618 ಪೈಕಿ 161 ಮಂದಿ, ಹಂತ 2 ರಲ್ಲಿ 1,192 ಪೈಕಿ 167 ಮಂದಿ, ಹಂತ 3 ರಲ್ಲಿ 1,352 ಪೈಕಿ 172 ಮಂದಿ, ಹಂತ 4 ರಲ್ಲಿ ಅತಿ ಹೆಚ್ಚು 274 ಮಂದಿ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಹಂತ 5 ರಲ್ಲಿ 122 ಮಂದಿ, ಹಂತ 6 ರಲ್ಲಿ 141 ಮಂದಿ, ಹಂತ 7 ರಲ್ಲಿ 151 ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಒಟ್ಟು 8,360 ಅಭ್ಯರ್ಥಿಗಳ ಪೈಕಿ 8,337 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆ ವಿಶ್ಲೇಷಿಸಿದೆ.
Poll (Public Option)

Post a comment
Log in to write reviews