ಕಾಂಗ್ರೆಸ್ ಆಡಳಿತದಲ್ಲಿ ಕ್ರೈಂ ರೇಟ್ ಹೆಚ್ಚಾಗಿದೆ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ !

ಶಿವಮೊಗ್ಗ : ಕಾಂಗ್ರೆಸ್ ನ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿಕ್ಕಾಪಾಲಾಗಿ ಹೋಗಿದೆ. ಜನರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ, ಪೊಲೀಸರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾದ್ಯಮದವರೊಂದಿಗೆ ಸುದ್ದಿಗೋಷ್ಠಿಯಲ್ಲಿತಿಳಿಸಿದರು. ಚನ್ನಗಿರಿಯಲ್ಲಿ ನಡೆದ ಗಲಾಟೆ ಪ್ರಕರಣ ದಿಗ್ಭ್ರಮೆಗೆ ಒಳಗಾಗುಸಿತ್ತದೆ. ಇವರು ಈರೀತಿ ಮಾಡುವುದನ್ನು ನೋಡಿದರೆ ಸರ್ಕಾರ ಹಾಗೂ ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ ಎಂದರು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣ ಗಳಲ್ಲಿ ಡಿಸಿಎಂ ಗಲಬೆ ನಡೆಸಿದವರನ್ನ ಅಮಾಯಕರು ಎಂದು ಲೆಟರ್ ಕೊಟ್ರೆ ಇನ್ನೇನು ಅಗುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾನದ ಬಗ್ಗೆ ಘೋಷಣೆ, ನಿನ್ನೆ ಕೊಪ್ಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಪರ ಪೋಸ್ಟ್ ಹಾಕಿದರೂ ಏನು ಆಗದಂತೆ ಇರುತ್ತಾರೆ ಎಂದು ದೂರಿದರು.
ಇವರು ಯಾರನ್ನು ರಕ್ಷಣೆ ಮಾಡಲು ಹೊರಟ್ಟಿದ್ದಾರೆ? ಎಂದು ಪ್ರಶ್ನಿಸಿರುವ ಮಾಜಿ ಸಚಿವರು, ಯಾದಗಿರಿ ದಲಿತನ ಹತ್ಯೆ, ಹುಬ್ಬಳ್ಳಿ ನೇಹಾಗೆ ಚೂರಿಹಾಕಿದ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಇದು ಲವ್ ಪ್ರಕರಣ ಎಂದು ಗೃಹ ಸಚಿವರು ಹೇಳುತ್ತಾರೆ.
ರಾಜ್ಯದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದೆ. ಆದ್ದರಿಂದ ರೇವ್ ಪಾರ್ಟಿಗೆ ಕರ್ನಾಟಕಕ್ಕೆ ಬರ್ತಾರೆ. ಕರ್ನಾಟಕ ಇದಕ್ಕೆ ಸೇಫೆಸ್ಟ್ ಅಂತ ಇಲ್ಲಿಗೆ ಬರ್ತಾರೆ. ಲೋಕಲ್ ಪೊಲೀಸ್ ಮೊದಲು ಹೋಗುವುದಿಲ್ಲ. ಅವರಿಗೆ ಮಾಮೂಲಿ ಕೊಟ್ಟೆ ಈ ಪಾರ್ಟಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ತುಷ್ಠಿಕರಣರದ ರಾಜಕಾರಣದಿಂದ ಸರ್ವಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕ ಇಂದು ಉಳಿದಿಲ್ಲ. ಕ್ರೈಂಗೂ ಕಾಂಗ್ರೆಸ್ ಗೂ ಬಾಂಧವ್ಯ ಇದೆ ಅನಿಸುತ್ತದೆ. ಇದರಿಂದ ಜನರ ನೆಮ್ಮದಿ ಹಾಳುಆಗುತ್ತಿದೆ ಎಂದು ಆರೋಪಿಸಿದರು.
Poll (Public Option)

Post a comment
Log in to write reviews