ಲಡಾಖ್: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಹೊಸ ಜಿಲ್ಲೆಗಳ ರಚನೆಯಿಂದಾಗಿ ಜನರಿಗೆ ಅನೇಕ ಪ್ರಯೋಜನಗಳನ್ನು ತಂದುಕೊಡಲಿದೆ. ಈ ಕೇಂದ್ರಾಡಳಿತ ಪ್ರದೇಶದ ಪ್ರತಿಯೊಂದು ಮೂಲೆ-ಮೂಲೆಯಲ್ಲಿ ಆಡಳಿತವನ್ನು ಬಲಪಡಿಸುವ ಮೂಲಕ ಅವರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತರಲಿದೆ ಎಂದು ಹೇಳಿದ್ದಾರೆ.
ಹೊಸ ಜಿಲ್ಲೆಗಳ ರಚನೆಯು ಪ್ರತಿಯೊಂದು ಮೂಲೆ ಮೂಲೆಯಲ್ಲೂ ಆಡಳಿತವನ್ನು ಹೆಚ್ಚಿಸುವ ಮೂಲಕ ಜನರಿಗೆ ಸಿಗುವ ಪ್ರಯೋಜನಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುತ್ತದೆ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಅಮಿತ್ ಶಾ ಹೇಳಿದ್ದಾರೆ.
ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಲಡಾಖ್ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಹೊಸ ಐದು ಜಿಲ್ಲೆಗಳಿವು
ಇನ್ನು ಲಡಾಖ್ ಪ್ರಸ್ತುತ ಎರಡು ಜಿಲ್ಲೆಗಳನ್ನು ಹೊಂದಿದೆ – ಲೇಹ್ ಮತ್ತು ಕಾರ್ಗಿಲ್. ಎರಡೂ ಜಿಲ್ಲೆಗಳು ತಮ್ಮ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ಗಳನ್ನು ಹೊಂದಿದ್ದು ಅವುಗಳನ್ನು ಆಡಳಿತ ನಡೆಸುತ್ತವೆ. ಹೊಸ ಜಿಲ್ಲೆಗಳ ರಚನೆಯ ನಂತರ, ಲಡಾಖ್ ಒಟ್ಟು ಏಳು ಜಿಲ್ಲೆಗಳನ್ನು ಹೊಂದಿರುತ್ತದೆ. ಇನ್ನು ಹೊಸ ಜಿಲ್ಲೆಗಳ ಹೆಸರು ಇಂತಿವೆ: ಝನ್ಸ್ಕಾರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್.
“ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಲಡಾಖ್ ಅನ್ನು ನಿರ್ಮಿಸುವ ನರೇಂದ್ರ ಮೋದಿಯವರ ದೃಷ್ಟಿಕೋನದ ಅನ್ವೇಷಣೆಯಲ್ಲಿ, ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು MHA ನಿರ್ಧರಿಸಿದೆ. ಹೊಸ ಜಿಲ್ಲೆಗಳಾದ ಝನ್ಸ್ಕರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್. ಪ್ರತಿಯೊಂದು ಮೂಲೆಮೂಲೆಯಲ್ಲಿಯೂ ಆಡಳಿತವನ್ನು ಬಲಪಡಿಸುವ ಮೂಲಕ ಜನರನ್ನು ಅವರ ಮನೆ ಬಾಗಿಲಿಗೆ ಲಡಾಖ್‌ನ ಜನರಿಗೆ ಹೇರಳವಾದ ಅವಕಾಶಗಳನ್ನು ಸೃಷ್ಟಿಸಲು ಬದ್ಧವಾಗಿದೆ ಎಂದು ಶಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.
Post a comment
Log in to write reviews