
ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಬುಧವಾರ ಡಬಲ್ ಮರ್ಡರ್ ನಡೆದಿದೆ. ಕೊಲೆಯಾದವರನ್ನು ಸುಹೇಲ್ ಅಲಿಯಾಸ್ ಕಲಂದರ್ ಅಲಿಯಾಸ್ ಸೇಬು (32) ಹಾಗೂ ಗೌಸ್ (30) ಎಂದು ಗುರುತಿಸಲಾಗಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಾಳಗದಲ್ಲಿ ಸುಹೇಲ್ ಹಾಗೂ ಗೌಸ್ ಎಂಬುವರ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ.
ಯಾಸೀನ್ ಖುರೇಷಿ ಗುಂಪು ಹಾಗೂ ಸುಹೇಲ್ ಗುಂಪುಗಳ ನಡುವೆ ಜಗಳವಾಗಿದೆ. ಈ ಎರಡು ಗುಂಪುಗಳ ನಡುವೆ ಮೊದಲು ಅಣ್ಣನಗರದಲ್ಲಿ ಜಗಳ ಪ್ರಾರಂಭವಾಗಿದ್ದು, ಒಂದು ಗುಂಪನ್ನು ಇನ್ನೊಂದು ಗುಂಪು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ದಾಳಿ ಮಾಡಿದೆ. ಈ ವೇಳೆ ಯಾಸೀನ್ ಖುರೇಷಿ ಹಾಗೂ ಆತನ ಗುಂಪು ಸುಹೇಲ್ ಹಾಗೂ ಗೌಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಐದಾರು ಬೈಕ್ಗಳು ಸಿಕ್ಕಿದ್ದು. ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
Poll (Public Option)

Post a comment
Log in to write reviews