
ಬೆಂಗಳೂರು: ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʻಡಬಲ್ ಇಸ್ಮಾರ್ಟ್ʼ ಥಿಯೇಟ್ರಿಕಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಉಸ್ತಾದ್ ರಾಮ್ ಪೋತಿನೇನಿ ಮತ್ತು ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.
ಇಂದು (ಆಗಸ್ಟ್ 9) ಚಿತ್ರತಂಡ ಬಿಗ್ ಬುಲ್ ಎಂಬ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ. ಪೂರಿ ಜಗನ್ನಾಥ್ ಅವರು ತಮ್ಮ ಖಳನಾಯಕರನ್ನು ಅಷ್ಟೇ ಶಕ್ತಿಶಾಲಿ ಪಾತ್ರಗಳಲ್ಲಿ ಪ್ರಸ್ತುತಪಡಿಸಲು ಹೆಸರುವಾಸಿಯಾಗಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ, ಅವರು ಡಬಲ್ ಇಸ್ಮಾರ್ಟ್‌ನಲ್ಲಿ ಮುಖ್ಯ ಖಳನಾಯಕನ ಮೇಲೆ ಹಾಡನ್ನು ತಯಾರಿಸಿದ್ದಾರೆ. ಬಿಗ್ ಬುಲ್ ಪಾತ್ರವನ್ನು ಸಂಜಯ್ ದತ್ ನಿರ್ವಹಿಸಿದ್ದಾರೆ.
ಭಾಸ್ಕರಭಟ್ಲ ರವಿಕುಮಾರ್ ಅವರ ಸಾಹಿತ್ಯವು ಬಿಗ್ ಬುಲ್ ಪಾತ್ರವನ್ನು ಪರಿಚಯಸಿದೆ. ಪೃಧ್ವಿ ಚಂದ್ರ ಮತ್ತು ಸಂಜನಾ ಕಲ್ಮಂಜೆ ಅವರ ಗಾಯನವು ಹಾಡಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ. ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ. ಡಬಲ್ ಇಸ್ಮಾರ್ಟ್ ಚಿತ್ರ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಕ್ಯಾಮೆರಾ ಹಿಡಿದಿದ್ದಾರೆ. ಸ್ವಾತಂತ್ರ್ಯ ದಿನದಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.
Poll (Public Option)

Post a comment
Log in to write reviews