
ತುಮಕೂರಲ್ಲಿ ಜಮೀನು ಖಾತೆ ಬದಲಾವಣೆ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ರಾಜಸ್ವ ನಿರೀಕ್ಷಕ ನರಸಿಂಹ ಮೂತಿ೯ ಮೇ 15 ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ಗದ್ದೆಹಳ್ಳಿ ಗ್ರಾಮದ ನಾಗರಾಜು ಅವರಿಗೆ ಖಾತೆ ಬದಲಾವಣೆ ಮಾಡಿಕೊಡಲು ನರಸಿಂಹ ಮೂರ್ತಿ 10 ಸಾವಿರ ಲಂಚ ಕೇಳಿದ್ದರು. ಹಣ ನೀಡಲು ಒಪ್ಪದ ರೈತ ನಾಗರಾಜು, ಲೋಕಾಯುಕ್ತರಿಗೆ ದೂರು ನೀಡಿದ್ದರು. ಮೇ 16ರಂದು ಸಿ.ಎಸ್.ಪುರ ನಾಡ ಕಚೇರಿಯಲ್ಲಿ ಹಣ ನೀಡುವ ಸಂದಭ೯ದಲ್ಲಿ ಹಣದ ಸಮೇತ ನರಸಿಂಹ ಮೂತಿ೯ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Poll (Public Option)

Post a comment
Log in to write reviews