
ಬೆಳಗಾವಿ: ಕುಕ್ಕರ್ ಸ್ಫೋಟಗೊಂಡು ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸವದತ್ತಿಯಲ್ಲಿ ಮಂಗಳವಾರ (ಆಗಸ್ಟ್ 13) ಸಂಭವಿಸಿದೆ. ಗಾಯಾಳುಗಳು ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ.
ಬೆಂಗಳೂರಿನಿಂದ 5, ಯಾದಗಿರಿ ಜಿಲ್ಲೆಯಿಂದ ಮೂವರು ಆಗಮಿಸಿದ್ದರು. ಸವದತ್ತಿಯ ಶ್ರೀ ರೇಣುಕಾ ಸಾಗರ ಲಾಡ್ಜ್ನಲ್ಲಿ ತಂಗಿದ್ದರು. ಈ ವೇಳೆ ಹೋಳಿಗೆ ಮಾಡಲು ಕುಕ್ಕರ್ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದಾರೆ. ಕುಕ್ಕರ್ ಎರಡು ಸೀಟಿಯಾದ ಬಳಿಕ ಸ್ಫೋಟಗೊಂಡಿದೆ.
ಗಂಭೀರವಾಗಿ ಗಾಯಗೊಂಡ ಇಬ್ಬರು ಮಹಿಳೆಯರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ದಾಖಲಿಸಿದ್ದಾರೆ. ಹಾಗೂ ಸಣ್ಣಪುಟ್ಟ ಗಾಯಗೊಂಡ 6 ಜನರನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
Poll (Public Option)

Post a comment
Log in to write reviews