
ಸ್ವಾತಂತ್ರ್ಯ ದಿನಾಚರಣೆ, ವರಲಕ್ಷ್ಮಿ ವ್ರತ,ವೀಕೆಂಡ್ ಹೀಗೆ ಸತತ ರಜೆ ಇರುವ ಕಾರಣ ಆಗಸ್ಟ್ 15ಕ್ಕೆ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ, ಗೌರಿ, ತಮಿಳಿನಲ್ಲಿ ತಂಗಲಾನ್, ತೆಲುಗಿನಲ್ಲಿ ‘ಡಬಲ್ ಇಸ್ಮಾರ್ಟ್’ ಮತ್ತು ‘ಮಿಸ್ಟರ್ ಬಚ್ಚನ್’ ಸಿನಿಮಾಗಳು ಬಿಡುಗಡೆ ಆಗಿದ್ದು, ಬಹುತೇಕ ಎಲ್ಲ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ ಎನ್ನಲಾಗಿದೆ.
ಆದರೆ ರವಿತೇಜ ನಟಿಸಿರುವ ತೆಲುಗಿನ ‘ಮಿಸ್ಟರ್ ಬಚ್ಚನ್’ ಸಿನಿಮಾದ ಡ್ಯಾನ್ಸ್ ಸ್ಟೆಪ್ ಒಂದು ವಿವಾದಕ್ಕೆ ಕಾರಣವಾಗಿದೆ.
ರವಿತೇಜ ನಟಿಸಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದ ‘ಸಿತಾರ’ ರೊಮ್ಯಾಂಟಿಕ್ ಹಾಡೊಂದರಲ್ಲಿ ಸ್ಟೆಪ್ ಒಂದಿದ್ದು, ಆ ಸ್ಟೆಪ್ನಲ್ಲಿ ರವಿತೇಜ, ನಟಿ ಭಾಗ್ಯಶ್ರೀ ಬೋರ್ಸೆ ಅವರ ನಡುವಿನ ಬಳಿ ಕೈ ಹಾಕಿ ಪಾಕೆಟ್ ರೀತಿ ಸೀರೆಯನ್ನು ಹಿಡಿದುಕೊಳ್ಳುತ್ತಾರೆ. ಈ ಸ್ಟೆಪ್ ಟ್ವಿಟ್ಟರ್ನಲ್ಲಿ ಪ್ರಶ್ನೆ ಎದ್ದಿದೆ.
‘ಮಿಸ್ಟರ್ ಬಚ್ಚನ್’ ಸಿನಿಮಾದ ನಿರ್ದೇಶಕ ಹರೀಶ್ ಶಂಕರ್, ‘ಶೇಖರ್ ಮಾಸ್ಟರ್ ಆ ಹಾಡಿಗೆ ಡ್ಯಾನ್ಸ್ ಕಂಪೋಸ್ ಮಾಡಿಸಿದ್ದು, ಅದು ಸಿನಿಮಾದ ಚಿತ್ರೀಕರಣದ ಮೊದಲ ದಿನ. ನಾನು ಚಿತ್ರೀಕರಣ ಸೆಟಪ್ ಮಾಡುವ ಬ್ಯುಸಿಯಲ್ಲಿದ್ದೆ. ಆ ಸ್ಟೆಪ್ ನೋಡಿದಾಗ ನನಗೂ ಅನ್ನಿಸಿತು ಬೇಡವಾಗಿತ್ತೇನೋ ಎಂದು. ಆದರೆ ಇದನ್ನು ತೆಗೆಯಲೇ ಬೇಕು ಎಂದೇನು ನನಗೆ ಅನ್ನಿಸಲಿಲ್ಲ ಎಂದಿದ್ದಾರೆ.
‘ಮಿಸ್ಟರ್ ಬಚ್ಚನ್’ ಸಿನಿಮಾ ಅಷ್ಟೇನೂ ಉತ್ತಮ ಪ್ರದರ್ಶನವನ್ನು ಬಾಕ್ಸ್ ಆಫೀಸ್ನಲ್ಲಿ ಕಾಣುತ್ತಿಲ್ಲ. ಹಲವರು ಸಿನಿಮಾದ ಅವಧಿಯ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರ್, ‘ವಿಮರ್ಶೆ, ಜನರ ಅಭಿಪ್ರಾಯಗಳನ್ನು ಗಮನಿಸಿ, ಸಿನಿಮಾದ ಅವಧಿಯನ್ನು ಕಡಿಮೆ ಮಾಡುತ್ತಿದ್ದೇವೆ. ಸಿನಿಮಾದಲ್ಲಿ ಇರುವ ಕೆಲವು ಹಿಂದಿ ಹಾಡುಗಳನ್ನು ತೆಗೆಯುತ್ತಿದ್ದೇವೆ, ಇದರಿಂದಾಗಿ ಸಿನಿಮಾ ವೇಗ ಪಡೆದುಕೊಳ್ಳಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
Poll (Public Option)

Post a comment
Log in to write reviews