
ನೆಲಮಂಗಲ: ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಈರುಳ್ಳಿ ತುಂಬಿದ್ದ ಟೆಂಪೋ ಪಲ್ಟಿಯಾಗಿ ಓರ್ವ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಅಂಚೆಪಾಳ್ಯದ ಬಳಿ ನಡೆದಿದೆ.
ಈರುಳ್ಳಿ ಟೆಂಪೋದಲ್ಲಿದ್ದ ಗಂಗಾಧರಪ್ಪ (55) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ತುಂಬಿದ ಟೆಂಪೋಗೆ ಹಿಂಬದಿಯಿಂದ ವೇಗವಾಗಿ ಬಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಇನ್ನೂ ಘಟನೆಯಲ್ಲಿ ಮತ್ತೊಂದು ವಾಹನದ ಚಾಲಕ ಓಬಣ್ಣ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟೆಂಪೋ ಪಲ್ಟಿಯಾಗಿದ್ದರಿಂದ ಕೆಲ ಜನರು ಈರುಳ್ಳಿ ತುಂಬಲು ಮುಗಿಬಿದ್ದ ಘಟನೆ ಸಹ ನಡೆದಿದೆ. ಸ್ಥಳಕ್ಕೆ ಬಂದ ನೆಲಮಂಗಲ ಸಂಚಾರಿ ಪೊಲೀಸರು ಎರಡೂ ವಾಹನಗಳನ್ನು ತೆರವು ಮಾಡಿದ್ದಾರೆ.
Poll (Public Option)

Post a comment
Log in to write reviews