
ಪಾಟ್ನಾ : ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಪಟ್ಟ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ ಪಶ್ಚಿಮ ಬಂಗಾಳದ ಮೂವರು ಸೇರಿದಂತೆ ನಾಲ್ವರನ್ನು ಬಂಧಿಸಿದೆ.
ಪಶ್ಚಿಮ ಬಂಗಾಳದ ಪರಗಣ ನಿವಾಸಿಗಳಾದ ಕೌಶಿಕ್ ಕುಮಾರ್ ಕರ್, ಸಂಜಯ್ ದಾಸ್ ಮತ್ತು ಕೋಲ್ಕತ್ತಾದ ಸುಮನ್ ಬಿಸ್ವಾಸ್ ಹಾಗೂ ಉತ್ತರ ಪ್ರದೇಶದ ಲಕ್ನೋ ಮೂಲದ ನಿವಾಸಿ ಸೌರಭ್ ಬಂಧೋಪಾಧ್ಯಾಯ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜೂನ್ 5 ರಂದು ಬಿಹಾರದ ನಿವಾಸಿಗಳಾದ ಅಶ್ವನಿ ರಂಜನ್, ವಿಕ್ಕಿ ಕುಮಾರ್ ಮತ್ತು ಅನಿಕೇತ್ ಅವರನ್ನು ಬಂಧಿಸಿತ್ತು ಮತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಇವರು ಅಂತಾರಾಜ್ಯ ಸಂಜೀವ್ ಮುಖಿಯಾ ಗ್ಯಾಂಗ್‌ನ ಸದಸ್ಯರಾಗಿದ್ದಾರೆ.
ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 74 ಎಫ್‌ಐಆರ್‌ಗಳನ್ನು ದಾಖಲಿಸಿದೆ ಮತ್ತು ವಿವಿಧ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ 150 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews