ಬೆಳಗಾವಿ: ಅಥಣಿ ತಾಲೂಕಿನ ಬೆವನೂರು ಗ್ರಾಮದಲ್ಲಿ ಖಾಗವಾಡ ಶಾಸಕ ರಾಜು ಕಾಗೆ ಅವರ ಆಪ್ತ ಮಾಧ್ಯಮದವರ ಮೇಲೆ ಬೆದರಿಕೆ ಹಾಕಿರುವ ಮಾತುಗಳ ವಿಡಿಯೋ ವೈರಲ್ ಆಗಿದೆ. ಬೆವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ರಾಜು ಕಾಗೆ ಹಾಗೂ ಅವರ ಆಪ್ತ, ಪತ್ರಕರ್ತರನ್ನು ಮನೆ ಹೊಕ್ಕಿ ಕೈ ಕಾಲು ಮುರಿತೀವಿ ಎಂದು ಸೊಕ್ಕಿನಿಂದ ಬೆದರಿಕೆ ಹಾಕಿದ್ದಾರೆ. ರಾಜು ಕಾಗೆ ಅವರ ಆಪ್ತ ಸಂತೋಷ ಚಿರಮೂಲೆ ಎಂಬಾತ ಮಾಧ್ಯಮದವರಿಗೆ ಬೆದರಿಕೆಯೊಡ್ಡಿದ್ದಾನೆ, ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ನಡೆದಿದೆ. ಸಂತೋಷ ಚುರಮುಲೆ ಅಥಣಿ ತಾಲೂಕಿನ ಮೊಳೆ ಗ್ರಾಮದ ವ್ಯಕ್ತಿಯಾಗಿದ್ದು, ರಾಜು ಕಾಗೆಯ ಬಗ್ಗೆ ಮಾಧ್ಯಮದವರು ಬೇರೆ ದೃಷ್ಟಿಯಿಂದ ವೈರಲ್ ಮಾಡಿದ್ರೆ ಮನೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿ, ಶಾಸಕರಿಗೆ ಓಲೈಸಿದಂತಿದೆ. ತನ್ನ ಎದುರೇ ಬೆದರಿಕೆ ಹಾಕ್ತಿದ್ರು ಕೂಡ ಶಾಸಕ ರಾಜು ಕಾಗೆ ತುಟಿ ಪಿಟಕ್ ಎನ್ನದ ಸುಮ್ಮನಿರುವುದು ಮಾಧ್ಯಮದ ವಿರುದ್ಧ ಹೀಯಾಳಿಸಿದಂತಿದೆ. ಶಾಸಕರು ಇಂಡೈರೆಕ್ಟ್ ಆಗಿ ಮೀಡಿಯಾದವರಿಗೆ ತನ್ನ ಆಪ್ತನಿಂದ ಧಮ್ಕಿ ಹಾಕುತ್ತಿದ್ದಾರಾ.....? ಸಂವಿಧಾನದ ನಾಲ್ಕನೇಯ ಅಂಗ ಮಾಧ್ಯಮದ ಪ್ರತಿನಿಧಿಗಳಿಗೆ ಧಮ್ಕಿ ಹಾಕ್ತಿದ್ದಾರೆ ಎಂದು ಮಾಧ್ಯಮದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Post a comment
Log in to write reviews