2024-12-24 07:03:45

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವೈದ್ಯರಿಗೆ ಕ್ಷಮೆ ಕೇಳೀದ ಚಿತ್ರದುಗ೯ ಕಾಂಗ್ರೆಸ್‌ ಶಾಸಕ ಎನ್‌ ವೈ ಗೋಪಾಲಕೃಷ್ಣ..!

ಚಿತ್ರದುರ್ಗ: ಚಿತ್ರದುಗ೯ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿರುವ ಸಕಾ೯ರಿ ಆಸ್ಪತ್ರೆಯಲ್ಲಿ ಮೇಣದಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಮೊಳಕಾಲ್ಮೂರು ಸಕಾ೯ರಿ ಆಸ್ಪತ್ರೆಯ ದುಸ್ಥಿತಿ ವಿಡಿಯೋ ಆಗುತ್ತಿದ್ದಂತೆ ಕಾಂಗ್ರೆಸ್‌ ಶಾಸಕ ಎನ್‌ ವೈ ಗೋಪಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯ .ಡಾ ಸುದೀಂದ್ರ ಬಾಬುಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದೆ.
ಶಾಸಕರು, ವೈದ್ಯ ಸುಧೀಂದ್ರ ಬಾಬು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವೈರಲ್ ವಿಡಿಯೋದಲ್ಲಿ ನೀವಿದ್ದೀರಿ, ಆಸ್ಪತ್ರೆಯಲ್ಲಿ ಸಮಸ್ಯೆ ಇದ್ದರೆ ನನಗೆ ತಿಳಿಸಬೇಕಿತ್ತು ಎಂದು ವೈದ್ಯ ಸುದೀಂದ್ರ ಬಾಬು ವಿರುದ್ಧ ಕೋಪಗೊಂಡಿದ್ದಾರೆ. ಈ ವೇಳೆ ವೈದ್ಯ, ನನಗೂ ವೈರಲ್ ವಿಡಿಯೋಗೂ ಸಂಬಂಧವಿಲ್ಲ. ವಿಡಿಯೋ ಯಾರು ತೆಗೆದಿದ್ದಾರೋ ಗೊತ್ತಿಲ್ಲ ಎಂದು ಶಾಸಕರಿಗೆ ಉತ್ತರ ನೀಡಿದ್ದಾರೆ. ಇದಕ್ಕೆ ಶಾಸಕರ ಬೆಂಬಲಿಗರು ಗರಂ ಆಗಿ, ನಮ್ಮ ಶಾಸಕರಿಗೆ ಕೈತೋರಿಸಿ ಮಾತಾಡಬೇಡಿ ಕೈ ಕೆಳಗಿಳಿಸಿ ಎಂದು ವೈದ್ಯರ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಆಗ ವೈದ್ಯಾಧಿಕಾರಿ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ? ಎಂದು ವೈದ್ಯ ಪ್ರಶ್ನಿಸಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದು ವೈದ್ಯ ಸುಧೀಂದ್ರಬಾಬು ಕಿಡಿಕಾರಿದ್ದಾರೆ. ಶಾಸಕರ ಎದುರೇ ವೈದ್ಯ ಮತ್ತು ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ನನ್ನ ಮೇಲೆ ಆಪಾದನೆ ಮಾಡುವುದು ಅರ್ಥಹೀನ ಎಂದು ವೈದ್ಯ ಕೂಗಾಡಿದ್ದಾರೆ. ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಕೊನೆಗೆ ವೈದ್ಯನಿಗೆ ಕೈಮುಗಿದು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸೋಣ ಎಂದು ಆಸ್ಪತ್ರೆಯಿಂದ ತೆರಳಿದರು.

Post a comment

No Reviews