
ನವದೆಹಲಿ: ಹರಿಯಾಣದ ಕಾಂಗ್ರೆಸ್ ಶಾಸಕಿ ಕಿರಣ್ ಚೌಧರಿ ತಮ್ಮ ಮಗಳು ಶೃತಿ ಚೌಧರಿ ಜತೆಗೆ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್ ವೈಯಕ್ತಿಕ ದಂಧೆ ನಡೆಸುತ್ತಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ. ಇದರಲ್ಲಿ ನನ್ನಂತಹ ಪ್ರಾಮಾಣಿಕ ಧ್ವನಿಗಳಿಗೆ ಅವಕಾಶವಿಲ್ಲ. ನನ್ನಂತಹವರನ್ನು ಬಹಳ ಯೋಜನಾಬದ್ಧವಾಗಿ ಹತ್ತಿಕ್ಕಲಾಗುತ್ತದೆ. ಕಾಲಕಾಲಕ್ಕೆ ಅಪಮಾನಗಳನ್ನು ಮಾಡಿ ಷಡ್ಯಂತ್ರಗಳನ್ನು ಹೆಣೆಯುತ್ತಾರೆ. ನನ್ನ ಜನರನ್ನು ಪ್ರತಿನಿಧಿಸುವ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ನನ್ನ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ರಾಜೀನಾಮೆ ಪತ್ರದಲ್ಲಿ ಕಿರಣ್ ಬರೆದುಕೊಂಡಿದ್ದರು.
Poll (Public Option)

Post a comment
Log in to write reviews