ರಾಜಕೀಯ
ಕಾಂಗ್ರೆಸ್ ಗಂಧದ ನಾಡನ್ನ ಗಾಂಜಾ ನಾಡಾಗಿ ಮಾಡುತ್ತಿದೆ : ರಾಜ್ಯ ಬಿಜೆಪಿ “ಎಕ್ಸ್” ನಲ್ಲಿ ಪೋಸ್ಟರ್ ಬಿಡುಗಡೆ

ರಾಜಧಾನಿ ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ ಹಿನ್ನೆಲೆ, ನಿರ್ಭಯವಾಗಿ ಗಾಂಜಾ, ಕೊಕೇನ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ರೇವ್ ಪಾರ್ಟಿಗಳು ಎಡಬಿಡದೆ ನಡೆಯುತ್ತಿವೆ. ಹೊರ ರಾಜ್ಯದ ವ್ಯಸನಿಯರು ಭಾಗವಹಿಸುತ್ತಿದ್ದಾರೆ. ಗಂಧದ ನಾಡು ಎಂಬ ಪ್ರಖ್ಯಾತಿ ಹೊಂದಿದ್ದ ಕರುನಾಡನ್ನ ಸರ್ಕಾರವೀಗ ಗಾಂಜಾ ನಾಡಾಗಿ ಪರಿವರ್ತಿಸುತ್ತಿರುವುದು ಬೇಸರದ ಸಂಗತಿ ಕೂಡಲೇ ಎಚ್ಚೆತ್ತುಕೊಳ್ಳಿ ಸ್ಲೀಪಿಂಗ್ ಸರ್ಕಾರ ಎಂದು ಚೇಡಿಸಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ “ಎಕ್ಸ್” ದ ಮೂಲಕ ಹೊಸ ರೀತಿಯ ಪೋಸ್ಟರ್ ಬಿಡುಗಡೆ ಮಾಡಿದೆ.
Poll (Public Option)

Post a comment
Log in to write reviews