ಕಾಂಗ್ರೆಸ್ ಸಂವಿಧಾನ ವಿರೋಧಿ ನಾಚಿಕೆ ಇಲ್ಲದೆ ಅಧಿಕಾರ ನಡೆಸುತ್ತಿದೆ: ಆರಗ ಜ್ಞಾನೇಂದ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಇಂದು ವಿಧಾನಸೌಧದ ಎದುರು ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿ ಆಗಿದೆ, ಇದರಿಂದಾಗಿ ಈಗ ರಾಜ್ಯದಲ್ಲಿ ವಿಚಿತ್ರ ಸನ್ನಿವೇಶ ಉದ್ಭವವಾಗಿದೆ, ಹಾಗಾಗಿ ನಾವಿಂದು ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟಿಸುವಂತಾಗಿದೆ ಎಂದರು.
ರಾಜ್ಯಪಾಲರು ಅನುಮತಿ ಇಲ್ಲದೆ ಸಿಎಂಗೆ ಅಪರಾಧಿ ಅಂತ ಪ್ರಾಸಿಕ್ಯೂಷನ್ ಕೊಟ್ಟಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಉತ್ತರಿಸಿದ ಅವರು, ದೂರು ಬಂದಿರುವ ಆಧಾರದ ಮೇಲೆ ರಾಜ್ಯಪಾಲರು ಸಿಎಂಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ, ಅಪರಾಧಿ ಅಂತ ಎಲ್ಲಿಯೂ ಕೊಟ್ಟಿಲ್ಲ. ಇದು ಕಾಂಗ್ರೆಸ್ ಪಕ್ಷದವರು ರಾಜ್ಯದ ಜನರ ಮೇಲೆ ಹೂವು ಇಡೋಕೆ ಹೋಗ್ತಿದೆ. ಈ ಹಿಂದೆಯೂ ಕೂಡ ಹಲವು ಬಾರೀ ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿರುವ ಉದಾಹರಣೆಗಳಿವೆ. ಆದರೆ ಅಧಿವೇಶನದಲ್ಲಿ ನಮಗೆ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ನುಡಿದರು.
ಇನ್ನು ಇಡೀ ಕ್ಯಾಬಿನೆಟ್ ನನ್ನ ಪರ ಇದೆ, ಶಾಸಕರು, ಸಚಿವರು ನನ್ನ ಪರವಾಗಿ ಇದ್ದಾರೆ ಎಂಬ ಮುಖ್ಯಮಂತ್ರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಡೀ ಕ್ಯಾಬಿನೆಟ್ ನನ್ನ ಪರ ಇದೆ, ಶಾಸಕರು, ಸಚಿವರು ನನ್ನ ಪರವಾಗಿ ಇದ್ದಾರೆ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಆದರೆ ಶಾಸಕರು ಸಚಿವರು ನಿಮ್ಮ ಪರವಾಗಿ ಇದ್ರೆ ಅನ್ಯಾಯ ನ್ಯಾಯವಾಗುತ್ತಾ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ನೀವೇ ಹೇಳ್ತಿರಾ, ನನ್ನ ಮೇಲೆ ಯಾವ ಕಪ್ಪು ಚುಕ್ಕಿ ಇಲ್ಲಾ ಅಂತ ಆದರೆ ಇದು ಕಪ್ಪು ಚುಕ್ಕಿನೆ ಆಗಿದೆಯಲ್ವಾ.? ಎಂದು ಪ್ರಶ್ನಿಸಿದರು.
ನಾವು ಬಿಜೆಪಿ-ಜೆಡಿಎಸ್ ಪಕ್ಷದವರು, ಕಾಂಗ್ರೆಸ್ ಮಾಡಿದ ಹಗರಣಗಳ ಬಗ್ಗೆ ಜನರಿಗೆ ಗೊತ್ತಾಗಲಿ ಎಂದು ಪಾದಯಾತ್ರೆ ಮಾಡಿದ್ದೆವು ಎಂದರು. ಇಷ್ಟೇ ಅಲ್ಲದೆ ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್, ಆಗಾಗ ಈ ಬಂಡೆ ಸಿಎಂ ಜೊತೆ ಇದೆ ಅಂತೀರಾ.? ಆದ್ರೆ ಈಗ ನೋ ರಿಯಾಕ್ಷನ್ ಅಂದಿದ್ದು ಎಷ್ಡು ಸರಿ ಎಂದು ಡಿ.ಕೆ.ಶಿ ಅವರನ್ನು ತಿವಿದರು.
ಒಂದು ನೈತಿಕತೆಯ ಪ್ರಶ್ನೆ ಇದೆ. ಅದನ್ನ ಮೀರಿದರೆ ನಿಮಗೆ ಅವಮಾನವಾಗುತ್ತೆ ಎಂದರು. ಆ ನೈತಿಕತೆ ಯಾವುದೆಂದರೆ ಯಡಿಯೂರಪ್ಪರ ಮೇಲೆ ಆಪಾದನೆ ಬಂದ ತಕ್ಷಣ ಅವರು ರಾಜೀನಾಮೆ ಕೊಟ್ಟಿದ್ದಾರೆ. ಆಗಲೂ ಕೂಡ ನೀವು ರಾಜಭವನ್ನು ದುರುಪಯೋಗ ಪಡಿಸಿಕೊಂಡಿದ್ದಿರಿ ಎಂದರು.
ಈಗ ರಾಜ್ಯದ ಮುಖ್ಯಮಂತ್ರಿ ಅಶುದ್ಧರಾಗಿದ್ದಾರೆ, ಪೊಲೀಸ್, ಲೋಕಾಯುಕ್ತರಿಗೂ ನಿಸ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ಹೋಗಿ ಕಾನೂನು ಹೋರಾಟ ಮಾಡಿ, ಅದನ್ನ ಬಿಟ್ಟು ಪ್ರಾಸಿಕ್ಯೂಷನ್‌ಗೆ ಏಕೇ ಬೇಡಾ ಅಂತಿದ್ದೀರಿ?. ನಿಮ್ಮ ಹೈ ಕಮಾಂಡ್ ಸಹ ಭ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ, ಇಡೀ ಜಗತ್ತಿಗೆ ಭ್ರಷ್ಟಾಚಾರ ಬಗ್ಗೆ ಹೇಳಿ ಕೊಟ್ಟಿದ್ದು ಕೂಡ ನಿಮ್ಮ ಹೈ ಕಮಾಂಡ್ ಎಂದರು.
ಇವತ್ತಿಗೂ ಗವರ್ನರ್ ಅವರ ಕೆಲಸವನ್ನು ಜವಾಬ್ದಾರಿಯಿಂದಲೇ ಮಾಡಿದ್ದಾರೆ. ಆದರೂ ರಾಜ್ಯಪಾಲರ ಪ್ರತಿಕೃತಿಗೆ ದಹನ ಮಾಡ್ತಿರಲ್ಲಾ ನಿಮಗೆ ನಾಚಿಕೆ ಆಗಲ್ವಾ.? ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದ ಶಾಂತಿ ಕದಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಸಿಡಿದರು.
ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ:
ಇದೇ ಕಾಂಗ್ರೆಸ್ ಪಕ್ಷ ನಾಚಿಕೆ ಇಲ್ಲದೆ ಅಧಿಕಾರ ನಡೆಸುತ್ತಿದೆ, ಪಕ್ಷದವರೆಲ್ಲಾ ಸೇರಿ ದಲಿತರ ಹಣ ಲೂಟಿ ಮಾಡಿದ್ದೀರಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಗುಡುಗಿದರು. ಅಷ್ಟೇ ಏಕೆ ನೀವು ಕಾಂಗ್ರೆಸ್ ಪಕ್ಷದವರು ಸಂಪೂರ್ಣವಾಗಿ ಪೊಲೀಸ್ ವ್ಯವಸ್ಥೆಯನ್ನೇ ದೂರಪಯೋಗ ಮಾಡುತ್ತಿದ್ದೀರಿ. ಇದನ್ನ ವಿರೋಧಿಸಿ ಬಿಜೆಪಿ, ಜೆಡಿಎಸ್ ಪಕ್ಷದವರು ಪ್ರತಿಭಟನೆ ಮಾಡ್ತಿದ್ದೆವೆ. ನಾವು ಇಷ್ಟಕ್ಕೆ ಹೋರಾಟ ಮಾಡೋದನ್ನು ನಿಲ್ಲಿಸೋದಿಲ್ಲ ಮುಂದುವರೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
Post a comment
Log in to write reviews