
ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಗೆ ಕಾಂಗ್ರೇಸ್ ನಲ್ಲಿ ಕಸರತ್ತು ಮುಂದುವರಿದಿದೆ. ಆಡಳಿತದಲ್ಲಿರುವ ಕಾಂಗ್ರೇಸ್‌ಗೆ ಆಕಾಂಕ್ಷಿಗಳು ಹೆಚ್ಚಾಗಿದ್ದು ಪರಿಷತ್ ಚುಣಾವಣೆ ಕೈ ಪಾಲಿಗೆ ತಲೆನೋವು ತಂದಿದೆ. ಈ ಹಿನ್ನಲೆಯಲ್ಲಿ ಇಂದು ಹನ್ನೊಂದು ಗಂಟೆಗೆ ಸಿ.ಎಮ್, ಡಿ.ಸಿ.ಎಮ್ ಇಬ್ಬರು ವಿಶೇಷ ವಿಮಾನದಲ್ಲಿ ದೆಹಲಿ ಪ್ರಯಾಣ ಕೈಗೊಂಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಸಿಎಮ್ ಡಿ.ಕೆ ಹಾಗೂ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂರು ಬಣಗಳಿದ್ದು ಮೂವರು ತಮ್ಮ ತಮ್ಮ ಬೆಂಬಲಿಗರಿಗೆ ಮಣೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಪರಿಷತ್ ನಾಮ ನಿರ್ದೇಶನ ಪಕ್ಷಕ್ಕೆ ಅಭ್ಯರ್ಥಿಗಳ ಆಯ್ಕೆ ತಲೆಬಿಸಿಯಾಗಿದೆ. ಜಾತಿವಾರು, ಸಮುದಾಯವಾರು,ಪ್ರಾಂತ್ಯವಾರು, ಪರಿಷತ್ ಸ್ಥಾನ ನೀಡಲು ಒತ್ತಡ ಹೆಚ್ಚಾದ ಹಿನ್ನಲೆ ಇಂದು ದೆಹಲಿಯಲ್ಲಿ ನಡೆಯುವ ಸಭೆ ಬಹಳ ಮಹತ್ವ ಪಡೆದಿದೆ. ಮಧ್ಯಾನ್ಹದ ಹೊತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಪಟ್ಟಿ ಬಿಡುಗಡೆ ಮಾಡುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ .
Poll (Public Option)

Post a comment
Log in to write reviews