ಅಣ್ಣಾಮಲೈ ಫೋಟೋ ಹಾಕಿ ಬೀದಿಯಲ್ಲೇ ಮೇಕೆ ತಲೆ ಕತ್ತರಿಸಿ ಸಂಭ್ರಮಿಸಿದ ಕಾಂಗ್ರೆಸ್-ಡಿಎಂಕೆ ಕಾರ್ಯಕರ್ತರು

ಚೆನ್ನೈ (ತಮಿಳುನಾಡು): ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೋತಿದ್ದಕ್ಕೆ ಕಾಂಗ್ರೆಸ್ ಹಾಗೂ ಡಿಎಂಕೆ ಕಾರ್ಯಕರ್ತರು, ಅಣ್ಣಾಮಲೈ ಪೋಟೋ ಹಾಕಿ ಮೇಕೆಯ ತಲೆಯನ್ನು ನಡುರಸ್ತೆಯಲ್ಲೇ ಕತ್ತರಿಸಿ ಸಂಭ್ರಮಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಕಾಂಗ್ರೆಸ್ ಹಾಗೂ ಡಿಎಂಕೆ ಕಾರ್ಯಕರ್ತರ ಈ ಅಮಾನವೀಯ ಹಾಗೂ ಅನಾಗರಿಕ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಅವರು, ಸಿಎಂ ಸ್ಟಾಲಿನ್ ಅವರೇ ನಿಮಗೆ ಹಾಗೂ ನಿಮ್ಮ ಅನಾಗರಿಕ ಕಾರ್ಯಕರ್ತರಿಗೆ ನಾಚಿಕೆಯಾಗಬೇಕು. ನಿಮ್ಮ ಈ ಕೀಳು ಮಟ್ಟದ ವರ್ತನೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮ ಅನಾಗರಿಕ ಕಾರ್ಯಕರ್ತರಿಗೆ ಸಭ್ಯತೆಯಿಂದ ಹೇಗೆ ವರ್ತಿಸಬೇಕೆಂದು ಹೇಳಿಕೊಡಿ. ಇನ್ನು ಈ ಘಟನೆಯನ್ನು ನೋಡಿಕೊಂಡು ಮುಖ ಪ್ರೇಕ್ಷರಾಗುವ ಬದಲು, ತಮಿಳುನಾಡು ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ಅವರು ಡಿಎಂಕೆ ಅಭ್ಯರ್ಥಿ ಗಣಪತಿ ರಾಜಕುಮಾರ್ ವಿರುದ್ಧ ಸೋಲುಂಡಿದ್ದಾರೆ. ಡಿಎಂಕೆ ಗಣಪತಿ ರಾಜಕುಮಾರ್ ಅವರು 5,68,200 ಮತಗಳನ್ನು ಪಡೆದರೆ, ಕೆ.ಅಣ್ಣಾಮಲೈ ಅವರು 4,50,132 ಮತಗಳನ್ನು ಗಳಿಸಿದ್ದಾರೆ. ಎಐಡಿಎಂಕೆಯ ಸಿಂಗಯ್ ಜಿ ರಾಮಚಂದ್ರನ್ ಅವರು 2,36,490 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.
Poll (Public Option)

Post a comment
Log in to write reviews