ಅನಿತಾ ಗೋಯಲ್ ನಿಧನಕ್ಕೆ ಸಂತಾಪ: ವಿಜಯ್ ಮಲ್ಯ ಮಾಡಿದ ಟ್ವಿಟ್ ಮರ್ಮವೇನು?

ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ನಿನ್ನೆಯಷ್ಟೇ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಇವರ ನಿಧನಕ್ಕೆ ಭಾರತದ ಒಂದು ಕಾಲದ ಉದ್ಯಮಿ, ಪ್ರಸ್ತುತ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮದ್ಯದ ದೊರೆ ಎಂದೇ ಫೇಮಸ್ ಆಗಿರುವ ವಿಜಯ್ ಮಲ್ಯ ಕೂಡ ಒಂದು ಕಾಲದಲ್ಲಿ ಭಾರತದ ವಾಯುಯಾನದಲ್ಲಿ ಹೆಸರಾಗಿ ಮರೆಯಾದ ಕಿಂಗ್ ಫಿಶರ್ ಏರ್‌ವೇಸ್‌ನ ಸಂಸ್ಥಾಪಕರಾಗಿದ್ದು, ಈ ಹಿನ್ನೆಲೆಯಲ್ಲಿ ಇವರ ಈ ಸಂತಾಪದ ಬರಹ ಕುತೂಹಲ ಹೆಚ್ಚಿಸಿದೆ.
ಅನಿತಾ ಅವರ ಅಗಲಿಕೆಯ ನೋವಿನಲ್ಲಿರುವ ಗೋಯಲ್ ಕುಟುಂಬಕ್ಕೆ ನನ್ನ ಹೃದಯ ತುಂಬಿದ ಸಂತಾಪಗಳು. ವಿಮಾನಯಾನ ಸೇವೆಯಲ್ಲಿ ಅನಿತಾ ಅವರು ಅಸಾಧಾರಣವೆನಿಸಿದ ಪ್ರತಿಸ್ಪರ್ಧಿಯಾಗಿದ್ದರು. ಜೊತೆಗೆ ಒಬ್ಬ ಉತ್ತಮ ಮನುಷ್ಯರಾಗಿದ್ದರು. ಕಿಂಗ್ ಫಿಶರ್ ಏರ್ ಲೈನ್ಸ್‌ಗೆ ಅರ್ಹ ಹಾಗೂ ದೀರ್ಘಕಾಲದ ಪ್ರತಿಸ್ಪರ್ಧಿಯಾಗಿದ್ದ ಜೆಟ್ ಏರ್‌ವೇಸ್‌ನ್ನು ಸೃಷ್ಟಿಸಿದ ನರೇಶ್ ಅವರಿಗೆ ಏನು ನೀಡಲಾಗಿದೆ ಎಂಬುದನ್ನು ನರೇಶ್ ಸಹಿಸಿಕೊಂಡಿರುವುದಕ್ಕೂ ನನಗೂ ಬೇಸರವಿದೆ. ಭಾರತದ ಎರಡು ಅದ್ಭುತವಾದ ಏರ್‌ಲೈನ್ಸ್‌ಗಳು ಇನ್ನಿಲ್ಲದಂತೆ ವಿನಾಶವಾಗಿದ್ದು, ಬೇಸರದ ವಿಚಾರ. ಅಚ್ಚರಿ ಏಕೆ ಬಹುಶಃ ಸತ್ಯವೂ ಅಂತಿಮವಾಗಿ ಜಯಿಸಲಿದೆ ಎಂದು ವಿಜಯ್ ಮಲ್ಯ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews