2024-12-24 06:22:30

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಎರಡು ಸಮುದಾಯಗಳ ನಡುವೆ ಕೋಮು ಗಲಭೆ: ಇಬ್ಬರಿಗೆ ಗಾಯ, ಅನೇಕ ವಾಹನಗಳು ಜಖಂ

ಭರುಚ್(ಗುಜರಾತ್): ಎರಡು ಸಮುದಾಯಗಳ ನಡುವೆ ಧಾರ್ಮಿಕ ಧ್ವಜ ಅಳವಡಿಕೆ ವಿಚಾರಕ್ಕೆ ಉಂಟಾದ ಕೋಮು ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ಗುಜರಾತ್​​ನ ಭರುಚ್​ ನಗರದಲ್ಲಿ ನಡೆದಿದ್ದು, 17 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ರಾತ್ರಿ ಭರುಚ್​ನ ಗೋಕುಲ್​ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಗಲಭೆಕೋರರು ಓಡಿಹೋಗಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಸಮುದಾಯದ ಉದ್ರಿಕ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅನೇಕ ವಾಹನಗಳು ಜಖಂಗೊಂಡಿವೆ ಎಂದು ಎಸ್​ಪಿ ಮಯೂರ್​ ಛವ್ಡಾ ಮಾಹಿತಿ ನೀಡಿದ್ದಾರೆ.

ಗೋಕುಲ್​ ನಗರದಲ್ಲಿ ಧಾರ್ಮಿಕ ಧ್ವಜ ಅಳವಡಿಕೆ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಭೆ ಉಂಟಾಗಿದೆ. ಒಂದು ಸಮುದಾಯ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದು, ಹಿಂಸಾಚಾರದಲ್ಲಿ ಭಾಗಿಯಾದ ಮತ್ತೊಂದು ಸಮುದಾಯದ 17 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಗೋಕುಲ್​ ನಗರ​​ ಎರಡು ಸಮುದಾಯದ ಜನರನ್ನು ಹೊಂದಿರುವ ಪ್ರದೇಶ. ಈದ್​ ಮಿಲಾದ್ ಹಿನ್ನೆಲೆಯಲ್ಲಿ ಧಾರ್ಮಿಕ ಧ್ವಜ ಮತ್ತು ಬ್ಯಾನರ್​ ಕಟ್ಟುವ ಸಲುವಾಗಿ ಘರ್ಷಣೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂಸಾಚಾರದಲ್ಲಿ ಭಾಗಿಯಾದ 20 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸ್​ ಅಧಿಕಾರಿ ಛವ್ಡಾ ತಿಳಿಸಿದರು.

ಭಾನುವಾರ ಸೂರತ್​ನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಣೇಶ ಪೆಂಡಾಲ್​ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆರು ಅಪ್ರಾಪ್ತರು ಸೇರಿದಂತೆ 27 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.



Post a comment

No Reviews