
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇದ್ದ ಹೆಲಿಕಾಪ್ಟರ್ ಪಿಥೋರ್ ಗಢದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಉತ್ತರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪಿಥೋರ್ ಗಢ ಜಿಲ್ಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಈ ಕುರಿತು ಎಎನ್ ಐ ವರದಿ ಮಾಡಿದ್ದು, ಹೆಲಿಕಾಪ್ಟರ್ ನಲ್ಲಿರುವ ಎಲ್ಲಾ ಜನರು ಸುರಕ್ಷಿತವಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ಇಬ್ಬರು ಅಧಿಕಾರಿಗಳು ಸುರಕ್ಷಿತವಾಗಿ ಪಿಥೋರಗಢದ ರಲಂ ಗ್ರಾಮದಲ್ಲಿ ಬಂದಿಳಿದರು, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು. ಚುನಾವಣಾ ಆಯೋಗದ ಉನ್ನತ ಅಧಿಕಾರಿ ಉತ್ತರಾಖಂಡ್‌ನ ಆದಿ ಕೈಲಾಶ್‌ಗೆ ಭೇಟಿ ನೀಡುತ್ತಿದ್ದಾಗ ಅವರ ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ಪ್ರಕ್ಷುಬ್ಧತೆಗೆ ಒಳಗಾಯಿತು, ಹಾಗಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
Poll (Public Option)

Post a comment
Log in to write reviews