
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್ಬಾಗ್ನ ಗಾಜಿನಮನೆಯಲ್ಲಿ ಫ್ಲವರ್ಶೋಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಕೂಡ ಭಾಗಿಯಾಗಿದ್ದಾರೆ. ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಮೂಡಿಬಂದಿದ್ದು, ಆಗಸ್ಟ್ 19ರವರೆಗೂ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಇರಲಿದೆ. ಸಂಸತ್, ಭೀಮ ಸ್ಮರಾಕ, ಅಂಬೇಡ್ಕರ್ ಅವರು ಹುಟ್ಟಿದ ಜಾಗ, ಅವರು ಹುಟ್ಟಿ ಬೆಳೆದು ಬಂದಂತಹ ಹಾದಿ ಹೇಗಿತ್ತು ಎನ್ನುವುದು ಪ್ಲವರ್ ಶೋ ನ ಪ್ರಮುಖ ಆಕರ್ಷಣೆಗಳಾಗಿವೆ.
ಪ್ಲವರ್ ಶೋನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳಿವೆ ಇದು ಜನರನ್ನು ಹೆಚ್ಚು ಆಕರ್ಷಣೆ ಮಾಡಿದೆ. 35 ಲಕ್ಷ ಹೂಗಳನ್ನ ಪ್ಲವರ್ ಶೋಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು ಫ್ಲವರ್ ಶೋಗೆಂದೆ ಆಂಧ್ರ, ಊಟಿ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಭಾಗದಿಂದ ಹೂಗಳು ಬಂದಿದ್ದು, ಲಾಲ್ ಬಾಗ್ನ ಗಾಜಿನ ಮನೆಯಲ್ಲಿ ಮೋಡಿ ಮಾಡಿವೆ.
Poll (Public Option)

Post a comment
Log in to write reviews