ಮೈಸೂರು : ಮುಡಾ ಹಗರಣ ಸಂಬಂಧ ಕೋರ್ಟ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿರುವ ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ಅವರು ತನಿಖೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ. ಇದೀಗ ಹಗರಣಕ್ಕೆ ಸಂಬಂಧಪಟ್ಟಂತೆ ಮುಡಾ ಅಧ್ಯಕ್ಷ ಮರಿಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾದಲ್ಲಿ ಯಾವುದೇ ಅಕ್ರಮ ನಡೆಸಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ, ಸುಖಸುಮ್ಮನೆ ನನ್ನ ಮೇಲೆ ಆರೋಪಿಸಬೇಡಿ. ನನ್ನ ಮನೆಯಲ್ಲಿ ನಾನು ಹಾಗೂ ಹೆಂಡತಿ ಮಾತ್ರ ಇರೋದು, ಆರೋಪ ಮಾಡುವ ಮುಂಚೆ ಯೋಚನೆ ಮಾಡಿ ಮಾತನಾಡಿ. ಈ ಮದ್ಯ ಸಿಎಂ ಮೈಸೂರಿಗೆ ಬಂದಾಗ ಕಾಂಗ್ರೆಸ್ ಕಾರ್ಯಕರ್ತರೇ ನನಗೆ ಘೇರಾವ್ ಹಾಕಿದರು, ನಿನ್ನಿಂದಲೇ ಸಿದ್ದರಾಮಯ್ಯನವರಿಗೆ ಈ ಗತಿ ಬಂದಿದೆ ಎಂದು ನನ್ನ ಮೇಲೆ ಹಲ್ಲೆ ನಡೆಸಿದರು. ಆದರೆ ಸಿಎಂ ನನ್ನ ದೇವರು. ಅವರಿಗೆ ದ್ರೋಹ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಮರಿಗೌಡ ಹೇಳಿದರು..
ನಾನು ಕಳೆದ 30 ವರ್ಷದಿಂದ ಸ್ಥಳೀಯ ಸಂಸ್ಥೆಯಿಂದ ಪ್ರಾಮಾಣಿಕನಾಗಿ ಕೆಲಸ ಮಾಡಿಕೊಂಡು ಬಂದ ಫಲವಾಗಿ ಸಿಎಂ ಈ ಸ್ಥಾನ ನನಗೆ ನೀಡಿದ್ದಾರೆ. ನನ್ನ ಪತ್ನಿಗೆ ನಿವೃತ್ತಿಯ ವೇಳೆ ಬಂದ 82 ಲಕ್ಷ ಹಣವನ್ನು ಎಫ್ ಡಿ ಇಟ್ಟಿದ್ದೇನೆ, ಜೊತೆಗೆ ಬ್ಯಾಂಕ್ ನಿಂದ ಸುಮಾರು 50 ಲಕ್ಷದ ಐವತ್ತು ಸಾವಿರ ರೂಪಾಯಿ ಲೋನ್ ಮಾಡಿ 2 ಕೋಟಿ ರೂಪಾಯಿ ಮನೆ ಕಟ್ಟಿದ್ದೇನೆ ಎಂದರು.
Post a comment
Log in to write reviews