ನನ್ನ ಪತ್ನಿಗೆ ಕಾನೂನು ಪ್ರಕಾರವೇ MUDA ಸೈಟ್ ಬಂದಿದೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಮೈಸೂರು ಮುಡಾ ಅಕ್ರಮ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಆದೇಶ ಹೊರಡಿಸಲಾಗಿದೆ. ಹಗರಣದ ಬಗ್ಗೆ 15 ದಿನಗಳ ಒಳಗೆ ಸಮಗ್ರ ವರದಿ ನೀಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದ್ದು, ತನಿಖಾ ವರದಿಯೊಂದಿಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸ್ಪಷ್ಟ ಅಭಿಪ್ರಾಯ ನೀಡಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ.
ಇದೀಗ MUDA ಹಗರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಪತ್ನಿಗೆ ಕಾನೂನು ಪ್ರಕಾರವೇ MUDA ಸೈಟ್ ಬಂದಿದೆ, ಇದು ಬಿಜೆಪಿಯವರ ಕಾಲದಲ್ಲಿ ಆಗಿದ್ದು. ನನ್ನ ಹೆಂಡತಿಗೆ ಬಾಮೈದ ಅರಿಶಿನ ಕುಂಕುಮವಾಗಿ ಜಮೀನು ಕೊಟ್ಟಿದ್ದ, ಮಲ್ಲಿಕಾರ್ಜುನ್ ಎಂಬ ಬಾಮೈದ ನನ್ನ ಪತ್ನಿಗೆ ಗಿಫ್ಟ್ ಕೊಟ್ಟಿದ್ದ. 3 ಎಕರೆ 16 ಗುಂಟೆ ಜಮೀನು ನನ್ನ ಹೆಂಡತಿ ಹೆಸರನಲ್ಲಿ ಇತ್ತು, ಅದು ಪತ್ನಿ ಹೆಸರಿನಲ್ಲಿರೋ ಜಮೀನು ನಾನು ಅಧಿಕಾರ ಇದ್ದಾಗ ತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅದೇ ಜಮೀನನ್ನು MUDAಅವರು ಸೈಟ್ ಮಾಡಿ ಹಂಚಿದ್ರು. ಕಾನೂನು ಪ್ರಕಾರ ನಮಗೆ 50:50 ಕೊಡೋದಾಗಿ ಹೇಳಿದ್ರು, ಅದರ ಪ್ರಕಾರವೇ ನಮಗೆ ಬೇರೆ ಕಡೆ ಸೈಟ್ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರವೇ ಪತ್ನಿ ಹೆಸರಿಗೆ ಸೈಟ್ ಹಂಚಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Poll (Public Option)

Post a comment
Log in to write reviews