
ಬೆಂಗಳೂರು : ನಾಡಿನೆಲ್ಲೆಡೆ ಮಹಾತ್ಮ ಗಾಂಧೀಜಿ ಜಯಂತಿ ಸಂಭ್ರಮ ಮನೆ ಮಾಡಿದೆ. ಆದ್ದರಂತೆ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಬಾಪೂಜಿ ಅವರಿಗೆ ನಮನ ಸಲ್ಲಿಸಿದ್ದಾರೆ. ಬಳಿಕ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆಯವರೆಗೂ ಬೃಹತ್ ಮೆರವಣಿಗೆ ಕೂಡ ನಡೆಸಲಾಯಿತು. ನೂರಾರು ಕಾರ್ಯಕರ್ತರು ಜಾಥಾದಲ್ಲಿ ಭಾಗಿಯಾಗಿದ್ದು, ಎಲ್ಲರೂ ಗಾಂಧಿ ಟೋಪಿ ಧರಿಸಲು ನಿರ್ದೇಶಿಸಲಾಗಿದೆ. ಹಾಗೆಯೇ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಬೃಹತ್ ಕಾಲ್ನಡಿಗೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಗಾಂಧಿಜೀಗೆ ನಮನ ಸಲ್ಲಿಸಲಾಗತ್ತೆ. ಪ್ರತಿಯೊಬ್ಬರು ಗಾಂಧಿ ಟೋಪಿ ಧರಿಸಿ , ಜಾಥಾದಲ್ಲಿ ಭಾಗವಹಿಸಿ ಎಂದು ಕೆಪಿಸಿಸಿ ಸೂಚನೆ ಕೊಟ್ಟಿದೆ.
Poll (Public Option)

Post a comment
Log in to write reviews