
ಬೆಂಗಳೂರು: ಪಾಲಿಕೆಯನ್ನು ಐದು ಭಾಗ ಮಾಡಿ ವಾರ್ಡ್ ಮರು ವಿಂಗಡಿಸುವ ಬಗ್ಗೆ ಶಾಸಕರ ನಿಯೋಗದ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯನ್ನು ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯದ ಹಲವು ಭಾಗಗಳಿಗೆ ವಿಸ್ತರಿಸಿ, ಐದು ಭಾಗವನ್ನಾಗಿ ವಿಂಗಡಿಸುವ ಚಿಂತನೆ ಮಾಡಲಾಗಿದೆ. ಪಾಲಿಕೆಯನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಹಾಗೂ ಕೇಂದ್ರವನ್ನಾಗಿ ಮಾಡಿ ತಲಾ 80 ವಾರ್ಡ್‌ಗಳಾಗಿ ಮರು ವಿಂಗಡಿಸುವ ಬಗ್ಗೆ ಚರ್ಚೆ ಮಾಡಲಾಗಿದೆ.
ಬೆಂಗಳೂರು ಹೊರವಲಯ ಸಾಕಷ್ಟು ಬೆಳೆದಿದೆ,ಹೆಚ್ಚು ಆದಾಯವಿರುವ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಭಾಗದ ಪ್ರದೇಶಗಳು ಬಿಬಿಎಂಪಿಯಿಂದ ಹೊರಗಿವೆ. ಈ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತಂದರೆ ಹೆಚ್ಚಿನ ತೆರಿಗೆ ಸಂಗ್ರಹಕ್ಕೂ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ, ಐದು ವಿಭಾಗಗಳಾಗಿ ವಿಂಗಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕ್ಷೇತ್ರ ಮರು ವಿಂಗಡಣಾ ಸಮಿತಿ ಸಲಹೆ ನೀಡಿದೆ. ಈ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆದಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ
Poll (Public Option)

Post a comment
Log in to write reviews