ಬೆಂಗಳೂರು: ಮೈಸೂರು ರಸ್ತೆಯ ಗಾಳಿ ಆಂಜನೇಯ ಟೆಂಪಲ್ ಬಳಿ ರಾಜಕಾಲುವೆ ಉಕ್ಕಿ ಹರಿದು ದೇವಾಲಯಕ್ಕೆ ತೊಂದರೆಯಾದ ಹಿನ್ನಲೆ ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ವಿಪರೀತವಾಗಿ ಮಳೆಯಾದ ಹಿನ್ನಲೆ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಟೆಂಪಲ್ ಬಳಿ ಎಂದಿನಂತೆ ರಾಜಕಾಲುವೆ ಉಕ್ಕಿ ಹರಿದು ಅವಾಂತರ ಸೃಷ್ಠಿಸಿದೆ. ಮಳೆ ಬಂದಾಗ ಇಲ್ಲಿ ಪ್ರತಿ ವರ್ಷವೂ ನೀರು ತುಂಬುತ್ತದೆ. ಹಾಗೆಯೇ ಗರ್ಭಗುಡಿ ಒಳಗೂ ನೀರು ಪ್ರವೇಶಿಸುತ್ತದೆ.ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಎಂ ಆಗಮನ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಮೂಲಕ ತರಾತುರಿ ಕಾಮಗಾರಿ ನಡೆಸಿದ್ದಾರೆ. ಸ್ಥಳ ಪರೀಶಿಲಿಸಿದ ನಂತರ ಸಿ ಎಂ ಸಿದ್ದರಾಮಯ್ಯ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆಯನ್ನು ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯರೊಡನೆ ಡಿಸಿಎಂ ಡಿಕೆಶಿವಕುಮಾರ್ ಸಹ ಇದ್ದರು.
ಮುಖ್ಯಮಂತ್ರಿಗಳ ಸೂಚನೆ ಏನು:
ಈ ಸಮಸ್ಯೆ ಉಧ್ಬವಿಸಲು ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಿಎಂ ಗೆ ಮಾಹಿತಿ ನೀಡಿದರು. ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂದು ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಈ ವಿಚಾರವನ್ನು ಆಲಿಸಿದ ಸಿಎಂ ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಮಸ್ಯೆ ಬಗೆಹರಿಸಲು ಕೊಟ್ಟ ಕಾಲಮಿತಿ ಮಳೆಗಾಲದೊಳಗೆ ಪೂರ್ಣಗೊಳಿಸಲು ಸೂಚಿಸಿದರು. ಅಷ್ಟೇ ಅಲ್ಲದೆ ಈ ವರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು. ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀರ ಎಂದು ಚೀಫ್ ಎಂಜಿನಿಯರ್ಗೆ ಎಚ್ಚರಿಕೆಯನ್ನು ನೀಡಿದರು.
Post a comment
Log in to write reviews