
ಕೇಂಜ ಚೇತನ್ ಕುಮಾರ್ ನಿರ್ದೇಶನದ “ಚೌ ಚೌ ಬಾತ್” ಈ ವರ್ಷ ಬಿಡುಗಡೆಗೊಂಡಿರುವ ಚೆಂದದ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ.
ಅತ್ಯುತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದ್ದ ಚೌ ಚೌ ಬಾತ್ ಇದೀಗ ಸಿನಿ ಬಜಾರ್ ಎಂಬ ಡಿಜಿಟಲ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿದೆ.ಬಿಡುಗಡೆಗೊಂಡ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಈ ಕಾರಣದಿಂದಲೇ ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾದ್ದೊಂದು ಸಮ್ಮೋಹಕ ಶೈಲಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರು..
ಸಿನಿಮಾ ಮಂದಿರಗಳಲ್ಲಿ ನೋಡಬೇಕೆಂದುಕೊಂಡು ಸಾಧ್ಯವಾಗದವರು, ಸಿನಿ ಬಜಾರ್ ಡಾಟ್ ಕಾಮ್ ನಲ್ಲಿ ಚೌ ಚೌ ಬಾತ್ ನ ಅಸಲೀ ಸವಿಯನ್ನು ಆಸ್ವಾದಿಸುವ ಅವಕಾಶವೀಗ ಒದಗಿ ಬಂದಿದೆ. ಇದು ಹೈಪರ್ ಲಿಂಕ್ ರೊಮ್ಯಾಂಟಿಕ್ ಜಾನರಿನ ಚಿತ್ರ. ಮೂರು ವಿಭಿನ್ನ ಪ್ರೇಮ ಕಥೆಗಳನ್ನು ತೆರೆದಿಡುವ ಚೌ ಚೌ ಬಾತ್ ಎಲ್ಲ ವರ್ಗದ ಪ್ರೇಕ್ಷಕರ ಗಮನ ಸೆಳೆಯುವಂತಿದೆ.
ಸನಾತನಯ್ ಪಿಕ್ಚರ್ಸ್ ಮತ್ತು ಕಾಮನಧೇನು ಫಿಲಂಸ್ ಅರ್ಪಿಸಿರುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿದೆ. ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡು `ಚೌ ಚೌ ಬಾತ್ʼ ಚಿತ್ರ ಮೂಡಿ ಬಂದಿದೆ.
Poll (Public Option)

Post a comment
Log in to write reviews