ಬಿಸಿಲಿನ ತೀವ್ರತೆಯಿಂದ ನೀರಿಲ್ಲದೆ ತರಕಾರಿ ದರವೂ ಹೆಚ್ಚಳವಾಗತೊಡಗಿದೆ. ತರಕಾರಿ ಬೆಳೆಯ ಮೇಲೆ ಗರಿಷ್ಠ ತಾಪಮಾನ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಸಹಜವಾಗಿ ತರಕಾರಿ ಬೆಲೆ ಏರಿಕೆ ಕಂಡಿದೆ. ಇನ್ನು ಬೀನ್ಸ್, ಗೆಡ್ಡೆಕೋಸು, ಬೀಟ್ರೂಟ್, ಹೀರೇಕಾಯಿ ಎಲ್ಲದರ ದರವೂ ಏರಿಕೆ ಆಗಿದೆ. ಅದರ ಜೊತೆ ಹಸಿ ಮೆಣಸಿನಕಾಯಿ ರೇಟ್ ಸಹ ಹೆಚ್ಚಳವಾಗಿದೆ.
ಕಳೆದ ವಾರ 60 ರಿಂ 80 ರೂಪಾಯಿ ಇದ್ದ ಮೆಣಸಿನಕಾಯಿ ಬೆಲೆ 120 ರೂಪಾಯಿ ತಲುಪಿದೆ. ಕೊಳ್ಳುವಾಗಲೇ ಗ್ರಾಹಕರಿಗೆ ಖಾರವಾಗಿದೆ. ಇದೇ ರೀತಿ ರಾಜ್ಯದಲ್ಲಿ ಬಿಸಿಲು ಮುಂದುವರೆದರೆ ತರಕಾರಿ ರೇಟ್ ಇನ್ನೂ ಹೆಚ್ಚಳವಾಗಲಿದೆ. ಸದ್ಯ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸಿ ಹೋಗ್ತಾ ಇದ್ದಾರೆ. ಒಂದೆಡೆ ಬಿಸಿಲು ಸುಡ್ತಾ ಇದ್ರೆ, ಇನ್ನೊಂದೆಡೆ ಜೇಬು ಸುಡ್ತಿದೆ ಎಂದು ಹೇಳ್ತಾ ಇದ್ದಾರೆ.
Tags:
- India News
- Kannada News
- vegetable prices
- vegetable
- vegetables
- vegetable price
- vegetable market
- vegetable rate
- vegetable farmers
- vegetable high in gujarat
- vegetables rates
- vegetables price hike
- vegetables price hike in hyderabad
- vegetable gardening
- vegetables price
- vegetable prices soar
- vegetable prices soaring high
- vegetable prices in india
- why are vegetable prices touching sky high?
- vegetable price rise
Post a comment
Log in to write reviews