ಕಲಬುರಗಿ: ಎರಡು ಚೆಕ್ ಡ್ಯಾಂಗಳಿಗೆ ಕ್ರೀಮಿನಾಶಕ ಔಷಧಿ ಸೇರ್ಪಡೆಯಾಗಿ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಾರೋ ದುಷ್ಕರ್ಮಿಗಳು ಬೇಕು ಅಂತಾ ಚೆಕ್ ಡ್ಯಾಂನ ನೀರಿಗೆ ರಾಸಾಯನಿಕ ಕ್ರಿಮಿನಾಶಕ ಸೇರ್ಪಡೆ ಮಾಡಿರುವ ಅನುಮಾನ ಇದೆ. ಚೆಕ್ ಡ್ಯಾಂನ ನೀರಿಗೆ ಕ್ರಿಮಿನಾಶಕ ಔಷದಿ ಸೇರ್ಪಡಯಾದ ಹಿನ್ನೆಲೆ ಎರಡು ಚೆಕ್ ಡ್ಯಾಂನ ಸಂಪೂರ್ಣ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಮತ್ತು ಇದರಿಂದಾಗಿ ಹಲವಾರು ಮೀನುಗಳು ಸಾವನ್ನಪ್ಪಿವೆ. ಬೋನಸ್ಪುರ ಮತ್ತು ಮೊಗದಂಪುರ ಗ್ರಾಮದ ಜನರಲ್ಲಿ ಆತಂಕವನ್ನು ಊಂಟು ಮಾಡಿದೆ.
ಜಾನುವಾರುಗಳು ಮತ್ತು ರೈತರು ಕುಡಿಯಲು ಬಳಸುವ ನೀರಿಗೆ ವಿಷ ಸೇರ್ಪಡೆ ಹಿನ್ನೆಲೆ, ಸ್ಥಳಕ್ಕೆ ಚಿಂಚೋಳಿ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆಯುಧ ಪೂಜೆಯಲ್ಲಿ ವಾಹನ ಪೂಜೆ ಮಾಡುವ ಸಲುವಾಗಿ ಮೊಗದಂಪುರ ಚೆಕ್ ಡ್ಯಾಂ ಬಳಿ ವಾಹನಗಳನ್ನು ನಿಲ್ಲಿಸಿ ತೊಳೆದಿದರು. ಅದರೆ ವಾಹನವೊಂದು ಕ್ರಿಮಿನಾಶಕ ಔಷಧ ಸಾಗಣೆಯಲ್ಲಿತು. ಆ ವಾಹನ ದಿಂದ ಬಂದ ಕ್ರಿಮಿನಾಶಕ ಔಷಧ ಮೊಗದಂಪುರ ಚೆಕ್ ಡ್ಯಾಂ ನೀರಿನಲ್ಲಿ ಸೇರಿಕೊಂಡು ಪಕ್ಕದ ಚೆಕ್ ಡ್ಯಾಂ ಕಡೆಗೆ ನೀರು ಹರಿದಿದೆ. ಕ್ರಿಮಿನಾಶಕ ಉಭಯ ಡ್ಯಾಂಗಳ ನೀರಿನಲ್ಲಿ ಹರಡಿಕೊಂಡಿದೆ. ಪ್ರಸ್ತುತ ಕುಂಚಾವರಂ ಪೊಲೀಸರು ಅಂದು ಆ ಸ್ಥಳಕ್ಕೆ ಬಂದಿದ್ದ ವಾಹನ ಯಾವುದು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಂಚಾವರಂ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
Post a comment
Log in to write reviews