2024-09-19 09:10:58

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ

777 ಚಾರ್ಲಿ  ಚಿತ್ರದ ಮೂಲಕ ಜನಪ್ರಿಯವಾಗಿರುವ ಶ್ವಾನ ಚಾರ್ಲಿ ಇದೀಗ 6 ಮುದ್ದು ಮರಿಗಳಿಗೆ ಜನ್ಮ ನೀಡಿದೆ. ಈ ಕುರಿತು ರಕ್ಷಿತ್​​ ಶೆಟ್ಟಿ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಚಾರ್ಲಿ ಮತ್ತು ಮರಿಗಳ ವಿಡಿಯೋ ಹಂಚಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ​ ಶೇರ್ ಮಾಡಿರುವ ವಿಡಿಯೋ: ''ಇದು ಸರ್ಪ್ರೈಸ್​​ ಲೈವ್​​. ಒಂದು ಸೂಕ್ತ ಕಾರಣ ಇದೆ. ಪ್ಲ್ಯಾನ್ಡ್ ಲೈವ್​ ಅಲ್ಲ. 777 ಚಾರ್ಲಿ ತೆರೆಕಂಡು ಎರಡು ವರ್ಷ ಆಗ್ತಾ ಬಂತು. ಈವರೆಗೆ ಚಾರ್ಲಿ ತಾಯಿಯಾದರೆ, ಆಕೆಯ ಪಯಣ ಪರಿಪೂರ್ಣಗುತ್ತದೆ ಎಂದು ಅನಿಸುತ್ತಿತ್ತು. ಇಡೀ ಚಿತ್ರತಂಡಕ್ಕೆ ಈ ಭಾವನೆ ಇತ್ತು. ಈ ಬಗ್ಗೆ ಕಿರಣ್​ ರಾಜ್​​​ ಮೊದಲು ಹೇಳಿದ್ದರು. ನಂತರ ನಾನು ಸೇರಿದಂತೆ ಚಿತ್ರತಂಡ, ಚಾರ್ಲಿ ಮರಿಗಳಿಗೆ ಜನ್ಮಕೊಡಬೇಕು. ಆಕೆ ತಾಯಿಯಾಗಬೇಕು ಎಂದುಕೊಳ್ಳುತ್ತಿದ್ದೆವು. ಪ್ರಮೋದ್​ಗೆ ಕರೆ ಮಾಡಿ ಚಾರ್ಲಿ ಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದೆ. ಚಾರ್ಲಿಗೆ ವಯಸ್ಸಾದ ಕಾರಣ ಇನ್ನು ಮರಿಗಳಾಗುವ ಸಾಧ್ಯತೆ ಕಡಿಮೆ ಎಂದು ತಿಳಿಸುತ್ತಿದ್ದರು. ಆದರೆ ಸರ್ಪೈಸಿಂಗ್ಲಿ ಮೇ 9ರಂದು ಚಾರ್ಲಿ 6 ಮುದ್ದು ಮರಿಗಳಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ಚಾರ್ಲಿ ಮತ್ತು ಮರಿಗಳನ್ನು ನೋಡಲು ಮೈಸೂರಿಗೆ ಬಂದಿದ್ದೇನೆ'' ಎಂದು ತಿಳಿಸಿದ ನಟ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ.

Post a comment

No Reviews