
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಲಾಕಪ್ ಡೆತ್ ನಿಂದ ಸಾವನಪ್ಪಿದ್ದಲ್ಲಾ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚನ್ನಗಿರಿಯಲ್ಲಿ ನಡೆದ ಘಟನೆ ಲಾಕಪ್ ಡೆತ್ ನಿಂದಾಗಿಲ್ಲ, ಆರೋಪಿ ಆದಿಲ್‌ಗೆ ಪಿಟ್ಸ್ ಬಂದಿತ್ತು, ಪೊಲೀಸರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನಪ್ಪಿದ್ದಾನೆ. ಪಿಟ್ಸ್ನಿಂದಾಗಿ ಆತ ಮೃತಪಟ್ಟಿದ್ದಾನೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು.
ಆರೋಪಿ ಆದಿಲ್ ನನ್ನು ಚನ್ನಗಿರಿ ಠಾಣೆಗೆ ಪೊಲೀಸರು ಕರೆತಂದ ತಕ್ಷಣ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆದರೆ ಆದಿಲ್ ಸಂಬಂಧಿಕರು ಲಾಕಪ್ ಡೆತ್ ಎಂದು ಆರೋಪಿಸಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ಮಾಡಿ ದಾಳಿ ನಡೆಸಿದರು. ಇದರಿಂದ ಕೆಲವು ಪೊಲೀಸರ ವಾಹನ ಜಖಂಗೊಂಡು ಹಾನಿಯಾಗಿದೆ ಎಂದು ಸಿಎಂ ತಿಳಿಸಿದರು.
Poll (Public Option)

Post a comment
Log in to write reviews